ಕುಶಾಲನಗರ:
ಸಮೀಪದ ಹೆಬ್ಬಾಲೆಯ ಶ್ರೀ ಕಾಳಿಕಾಂಬ ಅಮ್ಮನವರ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿಯನ್ನು ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಲಿಂಗಮೂರ್ತಿ ಮಾತನಾಡಿ, ವಿಶ್ವಕರ್ಮರು ವಾಸ್ತುಶಿಲ್ಪ, ಕಂಚು ಶಿಲ್ಪ, ಮರಗೆಲಸ, ಚಿನ್ನ ಬೆಳ್ಳಿಯಲ್ಲಿ ಅಲಂಕಾರಿಕ ವಸ್ತುಗಳು ಹಾಗೂ ಒಡವೆಗಳನ್ನು ತಯಾರಿಸುವಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಐದು ಕುಲ ಕಸುಬುಗಳನ್ನು ಒಳಗೊಂಡAತೆ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಲು ವಿಶ್ವಕರ್ಮರು ಶ್ರಮಿಸಿದ್ದಾರೆ ಎಂದರು.
ದೇವಾಲಯ ಸಮಿತಿ ಅಧ್ಯಕ್ಷ ಸದಾನಂದ ವಿಶ್ವಕರ್ಮ ಜಯಂತಿಯ ಬಗ್ಗೆ ಮಾತನಾಡಿದರು. ಮಹಾಮಂಗಳಾರತಿ ನಂತರ ಅಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು,
ಈ ಸಂದರ್ಭದಲ್ಲಿ ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಎಚ್. ಬಿ. ರಾಜಮೂರ್ತಿ, ವಿಶ್ವಕರ್ಮ ಸಮಾಜ ಮುಖಂಡರಾದ ಎಚ್.ವಿ. ಕಿಶೋರ್ ಕುಮಾರ್, ದಿನೇಶ್ ಆಚಾರಿ, ಎಚ್. ಎನ್. ಸುಬ್ರಹ್ಮಣ್ಯ ಆಚಾರ್, ದೇವಾಲಯ ಸಮಿತಿ ಉಪಾಧ್ಯಕ್ಷ ಎಚ್.ಎಸ್. ಮಂಜುನಾಥ್, ಕಾರ್ಯದರ್ಶಿ ಎಚ್.ವಿ. ಸೋಮಶೇಖರ್, ಖಜಾಂಜಿ ಲೋಕನಾಥ್ , ಸಹ ಕಾರ್ಯದರ್ಶಿ ಕಿರಣ್ ಕುಮಾರ್ ಹಾಗೂ ಸಮಿತಿ ನಿರ್ದೇಶಕರುಗಳು, ಭಜನಾ ಮಂಡಳಿಯ ಮಹಿಳಾ ಸದಸ್ಯರು ಇದ್ದರು.