ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೇವರ ವಿಶ್ವರೂಪ ದರ್ಶನ ನಡೆಯಿತು. ಎನ್.ಸದಾಶಿವ ನಾಯಕ್, ಜಿ.ವಸಂತ ಭಟ್ ಮೊದಲಾದವರಿದ್ದರು 
ಜಿಲ್ಲೆ

ಮಲ್ಯರಮಠ ದೇವಳದಲ್ಲಿ ವಿಶ್ವರೂಪ ದರ್ಶನ

ಇಂದಿರಾ ಎನ್ ಕೆ

ಗಂಗೊಳ್ಳಿ: ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೇವರ ವಿಶ್ವರೂಪ ದರ್ಶನ ಸೇವೆ ಭಾನುವಾರ ನಡೆಯಿತು.

ಬೆಳಗ್ಗೆ ಸುಪ್ರಭಾತ, ಭಜನೆ, ದೀಪಾಲಂಕಾರ, ದೇವರ ವಿಶ್ವರೂಪ ದರ್ಶನ, ಜಾಗರ ಪೂಜೆ, ಪ್ರಸಾದ ವಿತರಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ದೇವರಿಗೆ ವಿಶೇಷ ಪೂಜೆ ನೆರವೇರಿತು.

ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡವು. ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಜಿ.ವಸಂತ ಭಟ್, ಜಿ.ವೇದವ್ಯಾಸ ಕೆ.ಆಚಾರ್ಯ, ಜಿ.ವೆಂಕಟೇಶ ನಾಯಕ್, ಜಿ.ಗೋವಿಂದ್ರಾಯ ಆಚಾರ್ಯ, ಜಿ.ವಿಶ್ವನಾಥ ಆಚಾರ್ಯ, ಜಿ.ಶಂಕರ ಕೆ.ಆಚಾರ್ಯ, ಊರವರು ಉಪಸ್ಥಿತರಿದ್ದರು.