ಜಿಲ್ಲೆ

ವಿಶ್ವನಾಥಪುರ ಗ್ರಾಪಂಗೆ ಮುನಿವೆಂಕಟಮ್ಮ ಗಂಗಪ್ಪ ಅಧ್ಯಕ್ಷೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಕುಂದಾಣ
ಹೋಬಳಿಯ ವಿಶ್ವನಾಥಪುರ ಗ್ರಾಪಂ ಅಧ್ಯಕ್ಷರಾಗಿ ಮುನಿವೆಂಕಟಮ್ಮ ಗಂಗಪ್ಪ ಹಾಗೂ ಉಪಾಧ್ಯಕ್ಷರಾಗಿ ಕಲ್ಪನಾ ನಾರಾಯಣಸ್ವಾಮಿ ಆಯ್ಕೆಯಾದರು.
20 ಸದಸ್ಯ ಬಲದ ಪಂಚಾಯಿತಿಯಲ್ಲಿ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮುನಿವೆಂಕಟಮ್ಮ ಗಂಗಪ್ಪ ಮತ್ತು ನವೀನ್ ಹಾಗೂ ಉಪಾಧ್ಯಕ್ಷ ಸ್ಥಾನ್ಕಕೆ ಕಲ್ಪನಾ ನಾರಾಯಣಸ್ವಾಮಿ ಮತ್ತು ಮಂಜುಳಾ ಉಮೇದುವಾರಿಕೆ ಸಲ್ಲಿಸಿದ್ದರು.
ಚುನಾವಣೆಯಲ್ಲಿ ಮುನಿವೆಂಕಟಮ್ಮ ಗಂಗಪ್ಪ 11 ಮತ ಪಡೆದು ವಿಜೇತರಾದರು. ನವೀನ್ 7 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಕಲ್ಪನಾ ನಾರಾಯಣಸ್ವಾಮಿ 11 ಮತ ಪಡೆದು ಗೆಲುವು ಪಡೆದರು. ಪ್ರತಿಸ್ಪರ್ಧಿ ಮಂಜುಳಾ 7 ಮತ ಪಡೆದು ಪರಾಭವಗೊಂಡರು. ಸುಶೀಲಮ್ಮ ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷೆ ವೆಂಕಟಮ್ಮ ಗಂಗಪ್ಪ ಮಾತನಾಡಿ, ಗ್ರಾಮಸ್ಥರ ಕುಂದು ಕೊರತೆ, ಅಹವಾಲುಗಳ ಬಗ್ಗೆ ಅಧಿಕಾರಿಗಳು ಹಾಗೂ ಸರ್ವ ಸದಸ್ಯರ ಜತೆ ಪ್ರತಿ ಮಾಸಿಕ ಸಭೆಯಲ್ಲಿ ಚರ್ಚಿಸಿ ಸಕಾಲಕ್ಕೆ ಪರಿಹರಿಸುತ್ತೇನೆ ಎಂದರು.
ವಿಶ್ವನಾಥಪುರ ಗ್ರಾಮಸ್ಥರಿಗೆ ರಸ್ತೆ ಸಂಚಾರಕ್ಕೆ ಅನಾನುಕೂಲವಾಗಿದ್ದು, ಸ್ಕೈ ವಾಕ್ ನಿರ್ಮಾಣ ಮಾಡುವ ಕುರಿತು ಸಚಿವರ ಬಳಿ ನಿಯೋಗ ತೆರಳಿ ಮನವಿ ಮಾಡಲಾಗುವುದು ಎಂದರು.