ಕಂಪ್ಲಿ: ತಹಸಿಲ್ ಕಚೇರಿ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತ್ಯುತ್ಸವ ಪೂರ್ವಭಾವಿ ಸಭೆ ಮಂಗಳವಾರ ನಡೆಯಿತು.
ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ, ಸೆ.17ರಂದು ತಾಲೂಕು ಆಡಳಿತದಿಂದ ವಿಶ್ವಕರ್ಮ ಜಯಂತ್ಯುತ್ಸವವನ್ನು ಸರಳ, ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.
ವಿಶ್ವಕರ್ಮ ಸಮಾಜ ಸಂಘದ ಕಾರ್ಯದರ್ಶಿ ಡಿ.ಮೌನೇಶ ಮಾತನಾಡಿ, ಜಯಂತ್ಯುತ್ಸವದಲ್ಲಿ ಹಿರೇಹಾಳಿನ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠಾಧಿಪತಿ ಕಾಳಹಸ್ತ್ಯೇಂದ್ರ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ವಿಶ್ವಕರ್ಮ ಸಮಾಜದಿಂದ ಶಿಲ್ಪಕಲಾವಿದರನ್ನು ಗೌರವಿಸಲಾಗುವುದು.
ಶಾಸಕ ಜೆ.ಎನ್.ಗಣೇಶ್, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಡಿ.ಎ.ರುದ್ರಪ್ಪ, ಪುರಸಭೆ ನಾಮನಿರ್ದೇಶನ ಸದಸ್ಯ ಡಿ.ಮೌನೇಶ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಡಿ.ಕಾಳಾಚಾರ್, ಗುರುಮೂರ್ತಿ ಆಚಾರ್, ಅಳ್ಳಳ್ಳಿ ಮೌನೇಶ ಆಚಾರ್, ಆನಂದಾಚಾರ್, ಡಿ.ನಾರಾಯಣಾಚಾರ್, ಮೆಟ್ರಿ ಷಣ್ಮುಖ ಆಚಾರ್ ಇತರರಿದ್ದರು.