ಸರಗೂರು: ಪಟ್ಟಣ ಪಂಚಾಯಿತಿ ಮುಂಭಾಗವಿಷ್ಣುವರ್ಧನ್ ಅಭಿಮಾನಿ ಬಳಗದಿಂದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದರು. ಈ ವೇಳೆ ಕಂಟ್ರಾಕ್ಟರ್ ಎಸ್.ಎಸ್ ಬಸವರಾಜು ಮಾತನಾಡಿ, ನಮ್ಮ ನೆಚ್ಚಿನ ನಾಯಕರಾದ ಸಾಹಸಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಗುತ್ತಿದೆ, ಸಾರ್ವಜನಿಕರಿಗೆ ಸಿಹಿ ಹಂಚಿ, ವಿಷ್ಣುವರ್ಧನ್ ನಮ್ಮ ಜೊತೆ ಇಲ್ಲದಿದ್ದರೂ ಅವರು ಮಾಡಿರುವ ಕಾರ್ಯಗಳು ಹಾಗೂ ಅವರು ನಟಿಸಿರುವ ಚಲನಚಿತ್ರಗಳು ಇಂದಿಗೂ ಜೀವಂತವಾಗಿವೆ. ಸಿಂಹಾದ್ರಿಯ ಸಿಂಹ, ಹೃದಯವಂತ, ಕದಂಬ, ಈ ಬಂಧನ, ಆಪ್ತರಕ್ಷಕ, ಆಪ್ತಮಿತ್ರ, ಮಾತಾಡ್ ಮಾತಾಡ್ ಮಲ್ಲಿಗೆ, ಸಾಹುಕಾರ ಕೋಟಿಗೊಬ್ಬ, ಯಜಮಾನ, ಸೂರ್ಯವಂಶ ಹಾಗೂ ಸುಮಾರು 220 ಸಿನಿಮಾಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.
ಪಪಂ ಸದಸ್ಯ ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರ ಡಾ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡುವ ಮೂಲಕ ತನ್ನ ಗೌರವ ಹೆಚ್ಚಿಸಿಕೊಂಡಿದೆ, ಕಲಾವಿದರಿಗೆ ಸಾವಿಲ್ಲ. ವಿಷ್ಣುವರ್ಧನ್ ಬಹುಶಃ ಇಂದಿಗೆ ಜೀವಂತವಾಗಿದ್ದರೆ ಅವರ ಅಭಿಮಾನಿಗಳ ಸಂಭ್ರಮಾಚಾರಣೆ ಹೇಳತೀರದು ಎಂದರು.
ಕಾರ್ಯಕ್ರಮದಲ್ಲಿ ಪಪಂ ಸದಸ್ಯರು ಶ್ರೀನಿವಾಸ್, ವಿನಯ ಪ್ರಸಾದ್, ಮಂಜುನಾಥ್, ರಂಗನಾಥ್, ಸತೀಶ್ (ಕದಂಬ), ಶ್ರೀನಿವಾಸ್, ರಮೇಶ್, ಚೆನ್ನ ನಾಯಕ ಹಾಗೂ ವಿಷ್ಣುವರ್ಧನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಪೋಟೋ ಕ್ಯಾಪ್ಸನ್..