ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಮಂಗಳೂರಿನ ಆಲ್ವಿನ್ ಡಿಮೆಲ್ಲೊ ಎಂಬಾತ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾನೆ. ಪೊಲೀಸರು ತಕ್ಷಣ ಆತನನ್ನು ಬಂಧಿಸಿ ಹಣ ವಾಪಾಸು ಕೊಡಿಸಬೇಕು ಎಂದು ವಂಚನೆಗೆ ಒಳಗಾದ ಸಂತ್ರಸ್ತರು ಆಗ್ರಹಿಸಿದ್ದಾರೆ.
ಕಂಕನಾಡಿಯಲ್ಲಿ ‘ದಿ ಲೆಜೆಂಡ್’ ಎನ್ನುವ ಸಂಸ್ಥೆ ನಡೆಸುತ್ತಿದ್ದ ಆಲ್ವಿನ್ 3 ತಿಂಗಳಲ್ಲಿ ಉದ್ಯೋಗ ಕೊಡಿಸುವುದಾಗಿ 1.30 ಲಕ್ಷ ರೂ. ಪಡೆದಿದ್ದಾನೆ. ಮೂರು ವರ್ಷ ಕಳೆದಿದೆ ಉದ್ಯೋಗವೂ ಇಲ್ಲ, ಹಣವೂ ವಾಪಾಸು ಸಿಕ್ಕಿಲ್ಲ. ಈಗ ಹಣ ಕೊಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾನೆ. ಈ ಬಗ್ಗೆ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಬಂದರು ಠಾಣೆಗೆ ದೂರು ನೀಡಿದ್ದೇವೆ, ಇದುವರೆಗೆ ಎ್ಐಆರ್ ದಾಖಲಾಗಿಲ್ಲ ಎಂದು ಸಂತ್ರಸ್ತ ಬ್ರ್ಯಾಡೆನ್ ಪಿಂಟೊ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂತ್ರಸ್ತೆಯೊಬ್ಬಳ ತಾಯಿ ಅನಿತಾ ೆರ್ನಾಂಡಿಸ್ ಮಾತನಾಡಿ ನೆದರ್‌ಲ್ಯಾಂಡ್‌ನಲ್ಲಿ ಉದ್ಯೋಗವಿದೆ ಎಂದು ನಮ್ಮನ್ನು ನಂಬಿಸಿ 2 ಲಕ್ಷ ರೂ. ಅಡ್ವಾನ್ಸ್ ಹಣ ಪಡೆದು ಕೊಂಡಿದ್ದ. ಪುತ್ರಿಯ ಪಿಯುಸಿ ಶಿಕ್ಷಣ ಪೂರ್ಣಗೊಂಡ ಬಳಿಕ ಸಂಪರ್ಕಿಸಿದಾಗ 3 ಲಕ್ಷ ರೂ. ಬೇಡಿಕೆ ಇಟ್ಟಿದ್ದು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮಾರಿ ಅದನ್ನೂ ಕೊಟ್ಟಿದ್ದೇವೆ. ಆದರೆ ಆತ ದ್ರೋಹ ಮಾಡಿದ್ದಾನೆ. ಕಚೇರಿಯನ್ನು ಬಂದ್ ಮಾಡಿ ತಲೆ ಮರೆಸಿಕೊಂಡಿದ್ದಾನೆ ಎಂದು ಆರೋಪಿಸಿದರು.
ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ, 2023ರ ನವೆಂಬರ್ ತಿಂಗಳಲ್ಲೇ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ವಿವರಿಸಲಾಗಿತ್ತು. ಆಗಿನ ಆಯುಕ್ತರು ಕೇಂದ್ರ ವಿಭಾಗದ ಎಸಿಪಿಯವರನ್ನು ಭೇಟಿಯಾಗಲು ತಿಳಿಸಿದ್ದು, ಎಸಿಪಿಯವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಇದುವರೆಗೆ ಆರೋಪಿಯ
ಬಂಧನವಾಗಿಲ್ಲ. ಗೋವಾದಲ್ಲಿ ಕೂಡಾ ಆತ ಇದೇ ರೀತಿ ವಂಚಿಸಿರುವ ಮಾಹಿತಿಯಿದ್ದು, ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸಂತ್ರಸ್ತೆ ಲೀನಾ ೆರ್ನಾಂಡಿಸ್, ಕ್ಸೇವಿಯರ್ ಮಥಾಯಿಸ್, ಗಿಲರ್ಟ್ ವಾಸ್, ತುಳುನಾಡ ರಕ್ಷಣಾ ವೇದಿಕೆ ನಗರ ಅಧ್ಯಕ್ಷ ಶರಣ್ ರಾಜ್ ಉಪಸ್ಥಿತರಿದ್ದರು.
..........................