ಬೆಳಗಾವಿ: ನಗರದ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಲೆಕ್ಸಪೆಕ್ಟೊ ಸಂಸ್ಥೆ ಈಚೆಗೆ ಆಯೋಜಿಸಿದ್ದ ಎರಡನೇ ಅಂತಾರಾಷ್ಟ್ರೀಯ ವರ್ಚುವಲ್ ಮಧ್ಯಸ್ಥಿಕೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಅವಧೂತ್ ಗಾಯಿಡೋಲ್ (6ನೇ ಸೆಮಿಸ್ಟರ್), ರವಿಚಂದ್ರಗೌಡ ಪಾಟೀಲ (10 ನೇ ಸೆಮಿಸ್ಟರ್), ಆದಿತ್ಯ ಮೇದಾರ (8ನೇ ಸೆಮಿಸ್ಟರ್) ತಂಡಕ್ಕೆ ಉತ್ತಮ ಮಾತುಕತೆ ತಂಡದ ಸಲಹೆಗಾರ ಮತ್ತು ಕ್ಲೈಂಟ್ ಎಂಬ ಬಿರುದು, 20 ಸಾವಿರ ರೂ.ನಗದು ಬಹುಮಾನ ಗೆದ್ದುಕೊಂಡಿದ್ದಾರೆ. ಸಹಾಯಕ ಪ್ರಾಧ್ಯಾಪಕಿ ಡಾ.ಸಮೀನಾ ನಹಿದ್ ಬೇಗ್ ವಿಜೇತ ತಂಡಕ್ಕೆ ತರಬೇತಿ ನೀಡಿದ್ದರು. ಚೇರ್ಮನ್ ಎಂ.ಆರ್. ಕುಲಕರ್ಣಿ, ಪ್ರಾಂಶುಪಾಲ ಡಾ.ಎ.ಎಚ್.ಹವಾಲ್ದಾರ್ ವಿದ್ಯಾರ್ಥಿಗಳು ಮತ್ತು ತರಬೇತುದಾರರನ್ನು ಅಭಿನಂದಿಸಿದ್ದಾರೆ.