ಜಿಲ್ಲೆ

ವರೂರ ವೀರೇಶ್ವರ ಪುಣ್ಯಾರಾಧನೆ

ಹುಬ್ಬಳ್ಳಿ: ತಾಲೂಕಿನ ವರೂರ ಗ್ರಾಮದ ಶ್ರೀ ಗುರು ನಾಲ್ವತ್ತವಾಡ ವೀರೇಶ್ವರ ಮಹಾಶಿವಶರಣರ ಶಾಂತಾಶ್ರಮದಲ್ಲಿ ಶ್ರೀವಿರೇಶ್ವರ ಶರಣರ 106ನೇ ಪುಣ್ಯಾರಾಧನೆ ಫೆ. 13ರಂದು ಏರ್ಪಡಿಸಲಾಗಿದೆ.
ಶ್ರೀ ವಿಘ್ನೇಶ್ವರ, ಶ್ರೀ ವೀರೇಶ್ವರ ಹಾಗೂ ಪಂಚಾಚಾರ್ಯರ ಮೂರ್ತಿಗಳಿಗೆ ಮಹಾರುದ್ರಾಭಿಷೇಕ, ಅಷ್ಟೋತ್ತರ ಬಿಲ್ವಾರ್ಚಣೆ, ಮಹಾಮಂಗಳಾರತಿ ಜರುಗುವದು.

ನಂತರ ಶ್ರೀ ವೀರೇಶ್ವರ ಭಾವಚಿತ್ರದ ಮೆರವಣಿಗೆ 108 ಮುತೆದೆಯರ ರ್ಪೂಣಕುಂಭದೊಂದಿಗೆ ನಡೆಯಲಿದೆ. ಮಧ್ಯಾಹ್ನ ಭ್ರೂಹಿ ಮಹಾಗಣಾರಾಧನೆ ಹಾಗೂ ಮಹಾಪ್ರಸಾದ, ಸಂಜೆ ಧರ್ಮಸಭೆ ಜರುಗಲಿದ್ದು, ಕಲಘಟಗಿ ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು ಎಂದು ಶ್ರೀಮಠದ ಪೀಠಾಧಿಕಾರಿ ಶ್ರೀವಿರೂಪಾಕ್ಷಯ್ಯ ಶ್ರೀಗಳು ತಿಳಿಸಿದ್ದಾರೆ.