ಕಿಕ್ಕೇರಿ ಸಮೀಪದ ಕುಂದೂರು ಗ್ರಾಮದಲ್ಲಿ ವೀರಭದ್ರೇಶ್ವರ ಕೊಂಡೋತ್ಸವ ನಡೆಯಿತು.  
ಜಿಲ್ಲೆ

ವಿಜೃಂಭಣೆಯ ವೀರಭದ್ರೇಶ್ವರ ಸ್ವಾಮಿ ಕೊಂಡೋತ್ಸವ

ಕಿಕ್ಕೇರಿ: ಸಮೀಪದ ಕುಂದೂರು ಗ್ರಾಮದಲ್ಲಿ ಇತ್ತೀಚೆಗೆ ಗ್ರಾಮದೇವತೆ ವೀರಭದ್ರೇಶ್ವರಸ್ವಾಮಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.

ದೊಡ್ಡ ಮರದ ದಿಮ್ಮಿಗಳನ್ನು ಕೊಂಡೋತ್ಸವಕ್ಕೆ ತರಲಾಗಿತ್ತು. ದೇಗುಲದ ಮುಂದಿನ ಪ್ರಾಂಗಣದಲ್ಲಿ ಗುಂಡಿ ನಿರ್ಮಿಸಿ ದಿಮ್ಮಿಗಳನ್ನುಸುರಿದ ಬಳಿಕ ಕರ್ಪೂರ ಹಚ್ಚಿ ಅಗ್ನಿಸ್ಪರ್ಶ ಮಾಡಲಾಯಿತು. ಕೆಂಡವನ್ನು ಸಮತಟ್ಟು ಮಾಡಿದ ಬಳಿಕ ಕೊಂಡದ ಸುತ್ತ ದೇವರ ಪ್ರದಕ್ಷಿಣೆ ಮಾಡಲಾಯಿತು.

ನಂತರ ಅರ್ಚಕರು ಮೊದಲು ವೀರಭದ್ರೇಶ್ವರನಿಗೆ ಜೈಕಾರ ಹಾಕಿ ಕೆಂಡ ಹಾಯ್ದರು. ನಂತರ ಹರಕೆ ಹೊತ್ತ ಭಕ್ತರು ದೇವರಿಗೆ ನಮಿಸಿ ಕೆಂಡ ಹಾಯ್ದರು. ಅಂತಿಮವಾಗಿ ಭಕ್ತರು ದೇಗುಲ ಪ್ರವೇಶಿಸಿ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕಾರ ಮಾಡಿದರು.