ಜಿಲ್ಲೆ

ಕರೊನಾ ಸೇನಾನಿಗಳಿಗೆ ಸನ್ಮಾನ

ವಿರಾಜಪೇಟೆ: ಆರ್ಜಿ ಪೆರುಂಬಾಡಿ ಗ್ರಾಮದ ಅಯ್ಯಪ್ಪ ಭಜನಾ ಮಂದಿರ ಹಾಗೂ ಅಗ್ನಿ ಚಾಮುಂಡಿ ದೇವಾಲಯದ ಸಂಯುಕ್ತಾಶ್ರಯದಲ್ಲಿ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರೊನಾ ಸೇನಾನಿಗಳನ್ನು ಗೌರವಿಸಲಾಯಿತು.

ಅಗ್ನಿ ಚಾಮುಂಡಿ ದೇವಾಲಯದ ಅಧ್ಯಕ್ಷ ಕೆ.ಬಿ ಕಾವೇರಪ್ಪ ಮಾತನಾಡಿ, ಕರೊನಾ ಸೋಂಕು ದೇಶದೆಲ್ಲೆಡೆ ರುದ್ರನರ್ತನ ಮಾಡುತ್ತಿದೆ. ಪರಿಣಾಮ ಸಾವು-ನೋವುಗಳು ಸಂಭವಿಸುತ್ತಿದೆ. ಸೋಂಕು ತಡೆಗಟ್ಟಲು ಸರ್ಕಾರ ಹಲವು ಕ್ರಮಗಳನ್ನು ಜಾರಿಗೆ ತಂದಿದೆ. ಜನಸಾಮಾನ್ಯರು ಸೋಂಕಿನ ವಿರುದ್ಧ ಹೋರಾಟ ಮಾಡಲು ಪ್ರಯತ್ನಿಸಬೇಕು. ಸೋಂಕಿನ ವಿರುದ್ಧ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಸಿಬ್ಬಂದಿ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.

ಇದೇ ವೇಳೆ ಶುಶ್ರೂಷಾಧಿಕಾರಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಆಹಾರ ಕಿಟ್ ವಿತರಿಸಲಾಯಿತು. ಶ್ರೀ ಅಯ್ಯಪ್ಪ ಭಜನಾ ಮಂದಿರ ಅಧ್ಯಕ್ಷ ಕೆ.ಕೆ.ಅನಿಲ್‌ಕುಮಾರ್, ಉಪಾಧ್ಯಕ್ಷ ಗೋವರ್ಧನ, ಬಿ.ಪಿ ಜೀವನ್, ಅಯ್ಯಪ್ಪ ಭಜನಾ ಮಂದಿರದ ಕಾರ್ಯದರ್ಶಿ ಸಿ.ಅರ್.ಬಾಬು, ಅಗ್ನಿ ಚಾಮುಂಡಿ ದೇವಾಲಯದ ಉಪಾಧ್ಯಕ್ಷ ಬಿ.ಎಸ್.ರವೀಂದ್ರ, ಕಾರ್ಯದರ್ಶಿ ಟಿ.ಅರ್.ಗಣೇಶ್, ವೇಣು ಎಂ.ಕೆ.ಪಿ.ಆರ್.ಶಿವಪ್ಪ, ರಾಧಾಕೃಷ್ಣ ಇದ್ದರು.