ವಿರಾಜಪೇಟೆ: ವಿರಾಜಪೇಟೆ ಗೌರಿ-ಗಣೇಶ ಜನೋತ್ಸವ ಸಮಿತಿ ವತಿಯಿಂದ ‘ಇಂಧನ ಉಳಿಸಿ ರಾಷ್ಟ್ರ ರಕ್ಷಿಸಿ’ ಘೋಷವಾಕ್ಯದಡಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಾಥಾಗೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ಕೊಮ್ಮೆತೋಡುವಿನಲ್ಲಿ ಆರಂಭವಾದ ಸೈಕಲ್ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ಪುರಭವನ ತಲುಪಿತು. ಜಾಥಾದಲ್ಲಿ ವಿರಾಜಪೇಟೆ ಹಾಗೂ ಸುತ್ತಮುತ್ತಲಿನ ಸೈಕಲಿಸ್ಟ್‌ಗಳು ಪಾಲ್ಗೊಂಡಿದ್ದರು.
ಜನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಬರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಪುರಸಭೆ ಸದಸ್ಯರಾದ ರಾಜೇಶ್ ಪದ್ಮನಾಭ, ರಜನಿಕಾಂತ್, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಹನೀಫ್, ಕೊಮ್ಮೆತೋಡು ಸುತ್ತಮುತ್ತಲಿನ ಗ್ರಾಮದ ಪ್ರಮುಖರು ಹಾಜರಿದ್ದರು.