ಜಿಲ್ಲೆ

ಪಠ್ಯದಲ್ಲಿ ಗಮಕ ಅಳವಡಿಕೆಯಾಗಲಿ

ಎ. ಆರ್. ರಘುರಾಮ

ವಿರಾಜಪೇಟೆ: ಗಮಕವನ್ನು ಪಠ್ಯದಲ್ಲಿ ಅಳವಡಿಸುವ ಮೂಲಕ ವಿಶೇಷ ಕಲಾಪರಂಪರೆ ಉಳಿಸಲು ಮುಂದಾಗಬೇಕು ಎಂದು ಉಪನ್ಯಾಸಕಿ ಪದ್ಮಿನಿ ಶ್ರೀನಿವಾಸ ಹೇಳಿದರು.
ಸಮೀಪದ ಅರಮೇರಿ ಕಳಂಚೇರಿ ಮಠದ ಲಿಂಗರಾಜೇಂದ್ರ ಭವನದಲ್ಲಿ ಹಮ್ಮಿಕೊಂಡಿದ್ದ ಹೊಂಬೆಳಕು ಕಿರಣ 222- ಮಾಸಿಕ ತತ್ವ ಚಿಂತನಾಗೋಷ್ಠಿಯಲ್ಲಿ ‘ಗೀತ ರಾಮಾಯಣದಲ್ಲಿ ಶ್ರೀರಾಮ ಪಟ್ಟಾಭಿಷೇಕ’ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.
ಧರ್ಮದ ಮಾರ್ಗದಲ್ಲಿ ನಡೆಯಲು ರಾಮನಾಮದ ಗಮಕ ಕಲೆಯನ್ನು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೂ ಕಲಿಸಬೇಕು. ಗಮಕ ವಾಚನದ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಿದರೆ ಮಾತ್ರ ಅದು ವಿದ್ಯಾರ್ಥಿಗಳನ್ನು ತಲುಪುತ್ತದೆ.
ನೂರಾರು ಆದರ್ಶಗಳಿವೆ: ಪತ್ರಕರ್ತ ಅನಂತಶಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲೇ ವಿಶೇಷವಾದ ರಾಮಾಯಣ ಗ್ರಂಥದಲ್ಲಿ ರಾಮನ ನೂರಾರು ಆದರ್ಶ ಗುಣಗಳಿವೆ. ಗಮಕ ವಾಚನದ ಮೂಲಕ ಅದು ಪ್ರಭಾವಶಾಲಿಯಾಗಿ ಜನರನ್ನು ತಲುಪಲಿದೆ ಎಂದರು.