ಜಿಲ್ಲೆ

ಎನ್. ಸಿ. ಸಿ. ಘಟಕದ ವತಿಯಿಂದ   ಯೋಗ ದಿನಾಚರಣೆ

ಎ. ಆರ್. ರಘುರಾಮ
ವಿರಾಜಪೇಟೆ : ಪಟ್ಟಣದ ಸಂತ ಅನ್ನಮ್ಮ ಪ್ರೌಢ ಶಾಲೆಯಲ್ಲಿ ಶಾಲೆಯ ಎನ್ ಸಿ ಸಿ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನವನ್ನು ಶನಿವಾರ  ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಜೇಮ್ಸ್ ಡೊಮಿನಿಕ್ ಉದ್ಘಾಟಿಸಿದರು.  ಅವರು ಯೋಗದ ಮಹತ್ವದ ಬಗ್ಗೆ ಮಾತನಾಡಿದರು. ಯೋಗ ಗುರುಗಳಾದ ಸವಿತಾ ಉತ್ತಪ್ಪ ಹಾಗೂ ಉತ್ತಮನ್ ರವರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಮಾಡಿಸಿ ಯೋಗದ ಪಾತ್ರವನ್ನು ವಿವರಿಸಿದರು. ಮತ್ತು ವಿವಿಧ ಆಸನಗಳ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಯೋಗಾಭ್ಯಾಸವನ್ನು ಮಾಡಿದರು. ಈ ಸಂದರ್ಭದಲ್ಲಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಬೆನ್ನಿ ಜೋಸೆಫ್, ಏರ್ ಫೋರ್ಸ್ ಎನ್ ಸಿ ಸಿ ಅಧಿಕಾರಿ ಅಬ್ದುಲ್ ಮುನೀರ್, ಆರ್ಮಿ ಎನ್ ಸಿ ಸಿ ಘಟಕದ ಅಧಿಕಾರಿ ಸಹನಾ, ಶಿಕ್ಷಕರಾದ ರೂಪ, ಲಕ್ಷ್ಮೀಶ ಇತರರು ಉಪಸ್ಥಿತರಿದ್ದರು.