ಜಿಲ್ಲೆ

ಅಗ್ನಿ ಚಾಮುಂಡಿ ವಾರ್ಷಿಕ ತೆರೆ ಮಹೋತ್ಸವ

 5 ಮತ್ತು 6 ರಂದು ದೇವಿಗೆ ವಿಶೇಷ ಪೂಜೆ

ವಿರಾಜಪೇಟೆ : ಸಮೀಪದ ಬಾಳೂಗೋಡು ಗ್ರಾಮದ ಶ್ರೀ ಅಗ್ನಿ ಚಾಮುಂಡಿ ವಾರ್ಷಿಕ ತೆರೆ ಮಹೋತ್ಸವ ಮೇ. 5 ಮತ್ತು 6 ರಂದು ನೆರವೇರಲಿದೆ. ಗ್ರಾಮದಲ್ಲಿ ನೆಲೆ ನಿಂತ ಚಾಮುಂಡಿ ದೇವಿಗೆ 31 ನೇ ವಾರ್ಷಿಕ ತೆರೆ ಮಹೋತ್ಸವ

ಅಂಗವಾಗಿ 5 ರ ಬೆಳಗ್ಗೆ ಗಣಪತಿ ಹೋಮ, ಪ್ರಧಾನ ಹೋಮ, ನವಕ ಕಲಶ ಮತ್ತು ಆಶ್ಲೇಷ ಬಲಿ. 10ಕ್ಕೆ ತಕ್ಕರ ಮನೆಯಿಂದ ಭಂಡಾರ ತರುವುದು, 11ಕ್ಕೆ ನಾಗದೇವರಿಗೆ ವಿಶೇಷ ಪೂಜೆ, ನಂತರ ದೇವರ ದರ್ಶನ, ಮಧ್ಯಾಹ್ನ 12ಕ್ಕೆ

ದೇವಿಗೆ ಹಾಲಿನ ಅಭಿಷೇಕದೊಂದಿಗೆ ಮಹಾ ಪೂಜೆ ಸಮರ್ಪಣೆಯಾಗಲಿದೆ. ಬಳಿಕೆ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ತೆರೆ ಮಹೋತ್ಸವ, 8ಕ್ಕೆ ಕೊಟ್ಟಿ ಹಾಡುವುದು, 9ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, ನಂತರ ಕುಟ್ಟಿಚಾತ, ಕಾಲಭೈರವ ಗುಳಿಗ ನುಚ್ಚುಟ್ಟಿ ತೆರೆಗಳು ನೆರವೇರಲಿವೆ. 6ರ ಬೆಳಗ್ಗೆ 8ಕ್ಕೆ ವಿಷ್ಣು ಮೂರ್ತಿ ತೆರೆ ಮೇಲೇರಿ ಬೀಳುವದು, 10ಕ್ಕೆ ಶುದ್ಧ ಕಳಶ ಗುಳಿಗ, 12ಕ್ಕೆ ದೇವಿಗೆ ಮಹಾ ಪೂಜೆ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, 2ಕ್ಕೆ ಬಸಿರಿ ತೆರೆ (ಚಾಮುಂಡಿ ತೆರೆ) ಹೊರಡಲಿದೆ. ಸಂಜೆ 4ಕ್ಕೆ ಹರಕೆ ಒಪ್ಪಿಸುವ ಪ್ರಕ್ರಿಯೆ ನಡೆಯಲಿದೆ.