ಸಿಂದಗಿ: ವೀರಭದ್ರೇಶ್ವರ ಜಾತ್ರೆ ನಿಮಿತ್ತ ಪಟ್ಟಣದ ಚನ್ನವೀರ ಸ್ವಾಮೀಜಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಪಲ್ಲಕ್ಕಿ ಮಹೋತ್ಸವದೊಂದಿಗೆ ಅಗ್ನಿಶಮನ ಕಾರ್ಯ ಜರುಗಿತು.
ಜಾತ್ರಾ ಮಹೋತ್ಸವದ ನೇತೃತ್ವವನ್ನು ಸಾರಂಗಮಠ-ಗಚ್ಚಿನಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿದ್ದರು.
ಜಾತ್ರೆ ನಿಮಿತ್ತ ವೀರಭದ್ರ ದೇವರಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ನಂತರ ಪುರವಂತರ ಸೇವೆಯೂ ನಡೆಯಿತು. ಈ ವೇಳೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಜಾತ್ರೆಯಲ್ಲಿ ನೀಲಗಂಗಾ ದೇವಸ್ಥಾನದ ಧರ್ಮದರ್ಶಿ ಸುನೀಲಗೌಡ ದೇವರಮನಿ, ಗಣ್ಯ ವರ್ತಕ ಅಶೋಕ ವಾರದ, ಬಸವರಾಜ ಜೋಗೂರ, ಮಲ್ಲಯ್ಯ ಹಿರೇಮಠ, ವಿಶ್ವನಾಥ ಜೋಗೂರ, ಶೇಖರಪ್ಪ ಜೋಗೂರ, ಅಶೋಕ ಲೋಣಿ, ಎಸ್.ಎಂ.ಕುಂಬಾರ, ಎಸ್.ಎಂ.ಬಿರಾದಾರ, ನಿತ್ಯಾನಂದ ಅರಳಗುಂಡಗಿ, ಮಳಯ್ಯ ಮಠಪತಿ, ಶ್ರೀಶೈಲ ನಂದಿಕೋಲ, ಶಂಕ್ರಯ್ಯ ಮಠಪತಿ, ಸುರೇಶ ಜೋಗೂರ, ಪ್ರೊ.ರವಿ ಗೋಲಾ, ಶಾಂತವೀರ ಹಿರೇಮಠ ಇತರರಿದ್ದರು.