ಗಂಗಾವತಿ ತಾಲೂಕಿನ ಹಣವಾಳದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ನಿಮಿತ್ತ ಅಗ್ನಿಕುಂಡ ಮತ್ತು ಜಾತ್ರಾ ಮಹೋತ್ಸವದ ಕಳಸ ಮೆರವಣಿಗೆ ಜರುಗಿತು. 
ಜಿಲ್ಲೆ

ಶ್ರೀ ವೀರಭದ್ರೇಶ್ವರನಿಗೆ ಭಕ್ತರಿಂದ ಹರಕೆ ಸಲ್ಲಿಕೆ

ಗಂಗಾವತಿ : ತಾಲೂಕಿನ ಹಣವಾಳದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ನಿಮಿತ್ತ ಅಗ್ನಿಕುಂಡ ಮತ್ತು ಜಾತ್ರಾ ಮಹೋತ್ಸವ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಗ್ರಾಮದ ಶ್ರೀ ವೀರಭದ್ರೇಶ್ವರ ಮತ್ತು ಶ್ರೀಶರಣಬಸವೇಶ್ವರ ಮೂರ್ತಿಗೆ ಅಭಿಷೇಕ, ನಿರಂತರ ಭಜನೆ, ಮಹಾಮಂಗಳಾರತಿ ಮತ್ತು ವಿವಿಧ ಪೂಜೆಗಳು ನೆರವೇರಿಸಲಾಯಿತು.

ಪುರಾತನ ಕಾಲದ ಬಾವಿಯಲ್ಲಿ ಪೂಜೆ ಸಲ್ಲಿಸಿ, ಗಂಗೆ ಸ್ಥಳದಿಂದ ರಾಜಬೀದಿಯಲ್ಲಿ ಮೆರವಣಿಗೆ ಮೂಲಕ ದೇವಾಲಯಕ್ಕೆ ಆಗಮಿಸಿದ ಭಕ್ತರು ಅಗ್ನಿ ಕುಂಡದಲ್ಲಿ ಸಂಪ್ರದಾಯದಂತೆ ಮಡಿಯಿಂದ ಅಗ್ನಿ ಹಾಯುವ ಮೂಲಕ ಹರಕೆ ಸಲ್ಲಿಸಿದರು.

ಮಹಿಳೆಯರು ಕಲಶ, ಕನ್ನಡಿಯೊಂದಿಗೆ ಭಾಗವಹಿಸಿದ್ದು, ವೀರಗಾಸೆ ಪುರವಂತರು ವೀರಭದ್ರೇಶ್ವರ ಒಡಪುಗಳನ್ನು ಹೇಳುವ ಮೂಲಕ ಧಾರ್ಮಿಕ ಸಂಪ್ರದಾಯ ಕೈಗೊಂಡರು.

ಬುಕ್ಕಸಾಗರ ಮಠದ ಶ್ರೀಕರಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಜೆ ವೇಳೆ ಸರ್ವಾಲಂಕೃತ ರಥೋತ್ಸವ ಅದ್ದೂರಿಯಾಗಿ ನೆರವೇರಿಸಲಾಯಿತು. ದೇವಾಲಯ ಸಮಿತಿ ಪದಾಧಿಕಾರಿಗಳು ಗ್ರಾಮದ ಮುಖಂಡರು ಭಾಗವಹಿಸಿದ್ದರು.