ಜಿಲ್ಲೆ

ವಿಪ್ರ ಸಮುದಾಯದವರು ಸರಸ್ವತಿ ಪುತ್ರರು: ಶಾಸಕ ಎಂ.ಕೃಷ್ಣಪ್ಪ ಅಭಿಮತ

ಬೆಂಗಳೂರು: ವಿಪ್ರ ಸಮುದಾಯದವರು ಸರಸ್ವತಿ ಪುತ್ರರು. ಜನಾಂಗದ ಹಲವು ವ್ಯಕ್ತಿಗಳು ಎತ್ತರಕ್ಕೆ ಬೆಳದಿದ್ದಾರೆ ಎಂದು ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ವಿಪ್ರ ಬಳಗ, ನಗರದ ಶ್ರೀ ಲಕ್ಷ್ಮಿನರಸಿಂಹ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಪ್ರ ಸಂಘಟನೆಯಲ್ಲಿ ಉತ್ತಮ ವ್ಯಕ್ತಿಗಳಿದ್ದಾರೆ. ಇವರ ಅಭಿವೃದ್ದಿಗೆ ನಿಧಿ ಸಂಗ್ರಹ ವೇಗವಾಗಿ ಆಗುತ್ತದೆ. ಸಮುದಾಯದ ಕಾರ್ಯಕ್ರಮಕ್ಕೆ ಭವನ ನಿರ್ಮಿಸಲಾಗಿದೆ. ಬೆಂಗಳೂರು ದಕ್ಷಿಣದಲ್ಲಿ ಸಮಾರಂಭ ಮತ್ತು ಕಾರ್ಯಕ್ರಮಗಳಿಗೆ ಉಚಿತ ಜಾಗ ನೀಡಲಾಗುವುದು. ನಿಮ್ಮ ಸೇವೆ ಮಾಡಲು ಸದಾ ನಾನು ಸಿದ್ಧನಿದ್ದೇನೆ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ಮಾತನಾಡಿ, ನಮ್ಮ ಸಮುದಾಯದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಾಸಭಾದ ಸದಸ್ಯತ್ವ ಪಡೆಯಬೇಕು. ಕಾರ್ಯಕಾರಿ ಸಮಿತಿ ಸದಸ್ಯರು ಪ್ರತಿ ನಿತ್ಯ ಓರ್ವನನ್ನು ಸದಸ್ಯತ್ವ ನೋಂದಣಿ ಮಾಡಿಸಬೇಕು. ಸಮುದಾಯದವರಿಗೆ ಶಿಕ್ಷಣ, ಆರೋಗ್ಯದ ಕುರಿತು ಸಹಾಯಹಸ್ತ ನೀಡಲು 100 ಕೋಟಿ ರೂ. ದತ್ತಿನಿಧಿ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ. ಇದರಲ್ಲಿ 52 ಲಕ್ಷ ರೂ. ಸಂಗ್ರಹವಾಗಿದೆ. ಶ್ರೀಮಂತ ಇರುವ ವಿಪ್ರರು ದೇಣಿಗೆ ನೀಡಬೇಕು. ಹಿಂದೆ ನಡೆಸಿದ್ದ ಸಮಾವೇಶದಲ್ಲಿ ಉಳಿದಿರುವ 1 ಕೋಟಿ ರೂ. ಮೊತ್ತವನ್ನು ಸುವರ್ಣ ಭವನ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಸೋಮಶೇಖರ್, ಜಯರಾಂ, ಮಹಾಸಭಾ ಉಪಾಧ್ಯಕ್ಷ ಎಂ. ನರಸಿಂಹನ್, ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್, ಖಜಾಂಚಿ ಸುಬ್ಬ ನರಸಿಂಹ, ದಕ್ಷಿಣ ಜಿಲ್ಲಾ ಪ್ರತಿನಿಧಿ ಪ್ರತಿನಿಧಿರಾದ ಕೆ.ಎನ್.ರವಿಕುಮಾರ್, ಕೆ.ಸತೀಶ್ ಉರಾಳ್, ಅಂಬಿಕಾ ರಾಮಚಂದ್ರ, ಆರ್.ಜಿ.ರಾಜಶೇಖರ್ ಮತ್ತಿತರರಿದ್ದರು.