ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಪದಾಧಿಕಾರಿಗಳು ಕಾರಟಗಿಯಲ್ಲಿ ಬೈಕ್ ರ‌್ಯಾಲಿ ನಡೆಸಿದರು. ಸಮಿತಿ ರಾಜ್ಯ ಕಾರ್ಯದರ್ಶಿ ಹೇಮರಾಜ್ ವೀರಾಪುರ, ಜಿಲ್ಲಾಧ್ಯಕ್ಷ ಡಿ.ಹುಲ್ಲೇಶ ಬೂದಗುಂಪಾ, ಉಪಾಧ್ಯಕ್ಷ ಶಿವಪ್ಪ ಸಿದ್ದಾಪುರ, ಪ್ರಮುಖರಾದ ಜಮದಗ್ನಿ ಚೌಡಕಿ, ಸ್ವಾಮಿ ಬೂದಗುಂಪಾ, ಹುಲುಗಪ್ಪ ಗುಂಡೂರು, ಮಹೇಶ ಹಳೇಮನಿ ಇತರರಿದ್ದರು. 
ಜಿಲ್ಲೆ

ಒಳಮೀಸಲಾತಿ ನೀಡದಿದ್ದರೆ ಉಗ್ರ ಹೋರಾಟ

ಗಾಯತ್ರಿ ಮಾಲಿಪಾಟೀಲ್

ಕಾರಟಗಿ: ಒಳ ಮೀಸಲಾತಿ ವರ್ಗೀಕರಣ ಜಾರಿಗೆ ಆಗ್ರಹಿಸಿ ಪಟ್ಟಣದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ಬೈಕ್ ರ‌್ಯಾಲಿ ನಡೆಸಿದರು.

ಸಮಿತಿ ರಾಜ್ಯಾಧ್ಯಕ್ಷ ಬಿ.ಹುಸೇನಪ್ಪ ಸ್ವಾಮಿ ಮಾತನಾಡಿ, ಈಗಾಗಲೇ ಒಳ ಮೀಸಲಾತಿ ಜಾರಿಗೆ ಸೌಮ್ಯವಾಗಿ ಆಗ್ರಹಿಸಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ. ತಾತ್ಸಾರ ಹೀಗೆ ಮುಂದುವರಿದರೆ ಮಾ.12 ರಂದು ಕೊಪ್ಪಳದ ಡಾ.ಬಾಬು ಜಗಜೀವನ ರಾಮ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಧರಣಿ ನಡೆಸಲಾಗುವುದು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಜಾರಿಗೊಳಿಸಲು 7 ನ್ಯಾಯಮೂರ್ತಿಗಳ ಸಂವಿಧಾನ ಪೀಠ ಆಯಾ ರಾಜ್ಯ ಸರ್ಕಾರಕ್ಕೆ ಅಧಿಕಾರ ಕೊಟ್ಟಿದೆ. ಆದರೆ, ರಾಜ್ಯ ಸರ್ಕಾರ ಮಾದಿಗರ ಬೇಡಿಕೆ ಈಡೇರಿಸದೆ ಕಾಲಹರಣ ಮಾಡುತ್ತಿದೆ. ರಾಜ್ಯದ ಎಲ್ಲ ಶಾಸಕರು, ಸಚಿವರು ಧ್ವನಿಎತ್ತಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಮಿತಿಯ ರಾಜ್ಯ ಕಾರ್ಯದರ್ಶಿ ಹೇಮರಾಜ್ ವೀರಾಪುರ, ಜಿಲ್ಲಾಧ್ಯಕ್ಷ ಡಿ.ಹುಲ್ಲೇಶ ಬೂದಗುಂಪಾ, ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಸಿದ್ದಾಪುರ, ಡಿಎಸ್‌ಎಸ್‌ನ ಜಮದಗ್ನಿ ಚೌಡಕಿ, ತಾಲೂಕು ಉಪಾಧ್ಯಕ್ಷ ಸ್ವಾಮಿ ಬೂದಗುಂಪಾ, ಪ್ರಧಾನ ಕಾರ್ಯದರ್ಶಿ ಹುಲಗಪ್ಪ ಗುಂಡೂರು, ವಿಕಲಚೇತನರ ತಾಲೂಕಾಧ್ಯಕ್ಷ ಸಂಘದ ಮಹೇಶ ಹಳೇಮನಿ, ಪದಾಧಿಕಾರಿಗಳಾದ ಹನುಮಂತಪ್ಪ ಲಾಯದುಣಸಿ, ರಾಮಣ್ಣ ಮಾದಿಗ, ಅಂಜಿನೆಪ್ಪ ಈಳಿಗನೂರು, ಗಾಳೇಶ ಕಾರಟಗಿ, ಪ್ರಮುಖರಾದ ಕರಿಯಪ್ಪ ಬೂದಗುಂಪಾ, ಯಮನೂರ, ಮರಿಸ್ವಾಮಿ, ಜಡಿಯಪ್ಪ, ದ್ಯಾವಣ್ಣ, ವೀರೇಶ, ಶರಣಪ್ಪ ಸೋಮನಾಳ, ಪರುಶುರಾಮ ನಂದಿಹಳ್ಳಿ, ಹುಲುಗಪ್ಪ ಸಿದ್ದಾಪುರ, ಶಿವಪ್ಪ ಶ್ರೀರಾಮನಗರ, ಆಲಂಬಾಷಾ, ಚಿನ್ನಿ, ಜಂಬಪ್ಪ ಬಸವಣ್ಣಕ್ಯಾಂಪ್ ಇತರರಿದ್ದರು.