ಜಿಲ್ಲೆ

ನಿಯಮ ಉಲ್ಲಂಘನೆ ಹಿನ್ನೆಲೆ: ಒನ್​ 8 ಕಮ್ಯೂನ್​ ಬಾರ್​ ಆ್ಯಂಡ್​ ರೆಸ್ಟೋರೆಂಟ್​ಗೆ ನೋಟಿಸ್​

ಬೆಂಗಳೂರು: ನಗರದ ಎಂಜಿ ರಸ್ತೆಯ ರತ್ನಂ ಕಾಂಪ್ಲೆಕ್ಸ್​ ಕಟ್ಟಡದಲ್ಲಿರುವ ಒನ್​ 8 ಕಮ್ಯೂನ್​ ಬಾರ್​ ಆ್ಯಂಡ್​ ರೆಸ್ಟೋರೆಂಟ್​ಗೆ ಬಿಬಿಎಂಪಿ ನೋಟಿಸ್​ ನೀಡಿದೆ.

ಅಗ್ನಿಶಾಮಕ ದಳದಿಂದ ನಕ್ಷೆ, ಪ್ರಮಾಣಪತ್ರ, ಎನ್​ಓಸಿ ಅನುಮತಿ ಪರವಾನಗಿ ಪಡೆಯದೆ ಬಾರ್​​​​ ಆ್ಯಂಡ್​ ರೆಸ್ಟೋರೆಂಟ್​ ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ ಅಗ್ನಿ ಅವಡ ಸಂಭವಿಸಿದರೆ ಪ್ರಾಣಿ ಹಾನಿ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರರಾದ ಎಚ್​.ಎಂ.ವೆಂಕಟೇಶ್​, ನರಸಿಂಹಮೂರ್ತಿ ಎಂಬುವರು ಪಾಲಿಕೆಗೆ ದೂರು ಕೊಟ್ಟಿದ್ದರು.ದೂರಿನ್ವಯ ಅಗ್ನಿಶಾಮಕ ದಳದಿಂದ ಪಡೆದಿರುವ ಪರವಾನಗಿ ಅನುಮತಿ ಪತ್ರವನ್ನು ತಿಳುವಳಿಕೆ ಪತ್ರ ತಲುಪಿದ 7 ದಿನದೊಳಗೆ ಕಚೇರಿಗೆ ಭೇಟಿ ನೀಡಿ ಲಿಖಿತ ಸಮಜಾಯಿಸಿದೊಂದಿಗೆ ನೀಡಬೇಕು.ಇಲ್ಲವಾದಲ್ಲಿ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳುವುದಾಗಿ ಮದ್ಯದಂಗಡಿಗೆ ಪಾಲಿಕೆ ಎಚ್ಚರಿಕೆ ನೀಡಿತ್ತು. ಆದರೂ, ಮದ್ಯದಂಗಡಿಯಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ.

2ನೇ ನೋಟಿಸ್​ ನೀಡಿಕೆ: ಮೊದಲ ನೋಟಿಸ್​ಗೆ ಮದ್ಯದಂಗಡಿಯಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ. ಹಾಗಾಗಿ, 2ನೇ ನೋಟಿಸ್​ ನೀಡಲಾಗುವುದು. 2ನೇ ನೋಟಿಸ್​ಗೂ ಉತ್ತರ ನೀಡದಿದ್ದರೆ 3 ನೋಟಿಸ್​ ಕೊಡಲಾಗುವುದು. 3ನೇ ನೋಟಿಸ್​ಗೂ ಮಾಹಿತಿ ನೀಡದಿದ್ದರೆ ಬಾರ್​ ಆ್ಯಂಡ್​ ರೆಸ್ಟೋರೆಂಟ್​ ಮುಚ್ಚಿಸಲಾಗುವುದು ಎಂದು ಬಿಬಿಎಂಪಿ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ.