ಜಿಲ್ಲೆ

ವಿನೂ ಮಾಂಕಡ್ ಟ್ರೋಫಿ ಟೂರ್ನಿಗೆ ಶ್ರೇಯಸ್ ಆಯ್ಕೆ

ಶಿವಮೊಗ್ಗ: ವಿನೂ ಮಾಂಕಡ್ ಟ್ರೋಫಿ ಏಕದಿನ ಪಂದ್ಯಾವಳಿಯ 19 ವರ್ಷದೊಳಗಿನ ರಾಜ್ಯ ಕ್ರಿಕೆಟ್ ತಂಡಕ್ಕೆ ಕೆಎಸ್‌ಸಿಎನ ಶಿವಮೊಗ್ಗ ವಲಯ ಆಟಗಾರ ಶ್ರೇಯಸ್ ಸಾಗರ್ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಸಾಗರ ತಾಲೂಕಿನ ಯುವರಂಗ ಕ್ರಿಕೆಟ್ ಕ್ಲಬ್ ಪ್ರತಿನಿಧಿಸುತ್ತಿರುವ ಅವರು 10ನೇ ವಯಸ್ಸಿನಿಂದಲೇ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಶ್ರೇಯಸ್ ಮೂರು ವರ್ಷಗಳಿಂದ ಶಿವಮೊಗ್ಗ ಅಂತರವಲಯ ತಂಡ ಪ್ರತಿನಿಧಿಸಿದ್ದರು. ಯು-14 ಹಾಗೂ ಯು-16 ಕ್ರಿಕೆಟ್ ತಂಡಗಳಿಗೂ ಶಿವಮೊಗ್ಗ ವಲಯದಿಂದ ಆಯ್ಕೆಯಾಗಿದ್ದರು. ಇದೀಗ ರಾಜ್ಯದ 19 ವರ್ಷದೊಳಗಿನ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದಾರೆ.
ಅಂತರವಲಯ ಪಂದ್ಯಾವಳಿಗಳಲ್ಲಿ ಹಲವು ಶತಕಗಳನ್ನು ಬಾರಿಸಿದ್ದ ಶ್ರೇಯಸ್ ಇತ್ತೀಚೆಗೆ 19 ವರ್ಷದೊಳಗಿನ ರಾಜ್ಯ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆ ಪಂದ್ಯಾವಳಿಗಳಲ್ಲೂ ಶತಕಗಳನ್ನು ಸಿಡಿಸಿ ಮುಂಚಿದ್ದರು ಎಂದು ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್.ಅರುಣ್ ತಿಳಿಸಿದ್ದಾರೆ.