ಪುತ್ತೂರು ಗ್ರಾಮಾಂತರ: ಬಿಜೆಪಿ ಶಾಂತಿಗೋಡು ಗ್ರಾಮದ 142ನೇ ಬೂತ್ ಸಮಿತಿಯ ನೂತನ ಅಧ್ಯಕ್ಷರಾಗಿ ವಿನೋದ್ ಕರ್ಪುತಮೂಲೆ, ಕಾರ್ಯದರ್ಶಿಯಾಗಿ ಗಣೇಶ್ ಪೇರಡ್ಕ ಅವರು ಆಯ್ಕೆಗೊಂಡಿದ್ದಾರೆ.
ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ದೇವಪ್ಪ ಗೌಡ ಓಲಾಡಿ ಅವರ ಮನೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಪುತ್ತೂರು ತಾಲೂಕು ಮಹಿಳಾ ಮೋರ್ಚಾದ ಸದಸ್ಯೆ ಯಶೋ ಗೌಡ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಬೂತ್ ಸಮಿತಿಯ ಸದಸ್ಯರಾಗಿ ಪ್ರವೀಣ್ ಕಲ್ಕಾರ್, ರೂಪ ಪರಕಮೆ, ಹರೀಶ್ ಕರ್ಬಡ್ಕ, ಪ್ರವೀಣ್ ಶೆಟ್ಟಿ ಕುದುರೆಪ್ಪಾಡಿ, ಅಕ್ಷಿತಾ, ರವೀಂದ್ರ ಕಲ್ಕಾರ್, ರುಕ್ಮಯ್ಯ ಕಕ್ವೆ, ಬಾಬು ಗೌಡ ಕೈಂದಾಡಿ, ಯುವರಾಜ್ ಪಜಿರೋಡಿ, ಚಂಪಾವತಿ ಕರ್ಬಡ್ಕ ಅವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ವಿಶ್ವನಾಥ ಬಲ್ಯಾಯ, ನಿಕಟಪೂರ್ವ ಅಧ್ಯಕ್ಷ ಶ್ಯಾಮ್ ಭಟ್ ಕೈಂದಾಡಿ, ಬೂತ್ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣ ಸಾಲ್ಯಾನ್, ಕಾರ್ಯದರ್ಶಿ ದೇವರಾಜ್ ಕಲ್ಕಾರ್, ಶಿವಪ್ರಸಾದ್ ಕೈಂದಾಡಿ, ಹೊನ್ನಪ್ಪ ಗೌಡ ಕೈಂದಾಡಿ, ಪಕ್ಷದ ಹಿರಿಯ ಕಾರ್ಯಕರ್ತ ಬಾಲಕೃಷ್ಣ ಪ್ರಭು ಕಲ್ಕಾರ್, ಲೋಹಿತ್ ಕಲ್ಕಾರ್, ಆನಂದ ಗೌಡ ಕಲ್ಕಾರ್ ಮತ್ತಿತರರು ಉಪಸ್ಥಿತರಿದ್ದರು.