ಜಿಲ್ಲೆ

ಮಾರಿಕಾಂಬೆ ದರ್ಶನ ಪಡೆದ ವಿನಾಯಕ ಪೈ

ಶಿರಸಿ: ಸಿದ್ದಾಪುರದಲ್ಲಿ ಉತ್ತರ ಕನ್ನಡ ಜಿಲ್ಲಾ ಜಿಎಸ್​ಬಿ ಸೇವಾ ವಾಹಿನಿಯ ರಜತ ಸಂಭ್ರಮ ಮತ್ತು ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಲು ಆಗಮಿಸಿದ ಟಾಟಾ ಪೊ›ಜೆಕ್ಟ್ ಲಿಮಿಟೆಡ್​ನ ಮ್ಯಾನೇಜಿಂಗ್ ಡೈರೆಕ್ಟರ್, ಸಿಇಒ ವಿನಾಯಕ ಪೈ ಸೋಮವಾರ ನಗರದ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಪಡೆದರು.

ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದು, ವಿನಾಯಕ ಅವರಿಗೆ ಗೌರವ ಸಲ್ಲಿಸಿದರು. ಜಿಲ್ಲಾ ಸಮಾವೇಶ ಸಮಿತಿ ಕಾರ್ಯಾಧ್ಯಕ್ಷ ಕಾಶೀನಾಥ ಪೈ, ರಾಮು ಕಿಣಿ, ಜಯವಂತ ಶಾನಭಾಗ ಹಾಗೂ ದೇವಾಲಯದ ಅಡಳಿತ ಮಂಡಳಿಯ ಪದಾಧಿಕಾರಿಗಳು ಇದ್ದರು.