ಜಿಲ್ಲೆ

ಶ್ರೀ ಬಲಮುರಿ ಸಿದ್ದಿವಿನಾಯಕ ದೇವಸ್ಥಾನ ವಾರ್ಷಿಕೋತ್ಸವ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಶಾಲನಗರದ ನೆಹರು ಬಡಾವಣೆಯಲ್ಲಿರುವ ಶ್ರೀ ಬಲಮುರಿ ಸಿದ್ದಿವಿನಾಯಕ ದೇವಸ್ಥಾನ ಸೇವಾ ಟ್ರಸ್ಟ್ 27 ನೇ ವಾರ್ಷಿಕೋತ್ಸವ ಮತ್ತು 25 ನೇ ವರ್ಷದ ಉತ್ಸವ ಮೂರ್ತಿಯ ಮೆರವಣಿಗೆ ಕಾರ್ಯಕ್ರಮ ಎರಡು ದಿನಗಳು ನಡೆಯುತ್ತಿದ್ದು ಶುಕ್ರವಾರ ದೇವಾಲಯದಲ್ಲಿ ಕಳಸ ಸ್ಥಾಪನೆ, ಶುದ್ದಿ, ಪುಣ್ಯಾಹ, ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ ಹಾಗೂ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆದು ಸಂಜೆ ವೇಳೆಯಲ್ಲಿ ದೇವಾಲಯದ ರಂಗ ವೇದಿಕೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶನಿವಾರ (ಫೆ.8) ಬೆಳಗ್ಗೆ 9 ಗಂಟೆಗೆ ಗಣಪತಿ ಹೋಮ, ಸ್ವಾಮಿಗೆ ಪಂಚಾಮೃತ ಅಭಿಷೇಕ ಮಧ್ಯಾಹ್ನ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿನಿಯೋಗ ನಡೆಯಲ್ಲಿದ್ದು, ಸಂಜೆ ನೆಹರು ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ಗೋಷ್ಠಿಯೊಂದಿಗೆ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ.

ವಾರ್ಷಿಕೋತ್ಸವ ಪೂಜೆಯಲ್ಲಿ ಬಲಮುರಿ ಸಿದ್ದಿವಿನಾಯಕ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಜೆ. ರೇಣುಕುಮಾರ್, ಕಾರ್ಯದರ್ಶಿ ಕೆ.ವಿ. ಅರುಣ, ಖಜಾಂಚಿ ಬಿ.ಸಿ. ಆನಂದ್ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ದೇವಾಲಯ ಸಮಿತಿ ಸದಸ್ಯರು ಇದ್ದರು.