ಮಂಗಳೂರು : ಮಂಗಳೂರು ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್ ಬ್ಯಾಂಕ್) ಅಧ್ಯಕ್ಷರಾಗಿ ವಿನಯ ಕುಮಾರ್ ಸೂರಿಂಜೆ ಹಾಗೂ ಉಪಾಧ್ಯಕ್ಷರಾಗಿ ಸೀತಾರಾಮ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿನಯಕುಮಾರ್ ಸೂರಿಂಜೆ ಅವರು ಕಳೆದ ಎರಡು ಅವಧಿಗೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿದ್ದು, ಈಗ ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ನಡೆದಿದ್ದು ವಿನಯ ಕುಮಾರ್ ಸೂರಿಂಜೆ, ಸೀತಾರಾಮ ಶೆಟ್ಟಿ, ರೋಹಿಣಿ ಜೆ.ಅಮೀನ್, ಜೋಸೆಫ್ ಡಿಸೋಜಾ, ಬಿ.ರಘುನಾಥ ಪಂಡಿತ್,ಶಾಂತಿಪ್ರಸಾದ್ ಹೆಗ್ಡೆ , ನಾಗರಾಜ ರಾವ್, ಯಶವಂತ ವಿ. ಶೆಟ್ಟಿ , ಪ್ರದೀಪ್ ಕುಮಾರ್ , ದಿನೇಶ್ ನಾಯ್ಕ, ಹರಿಪ್ರಸಾದ್. ಜಿ.ಶೆಟ್ಟಿ, ಮೋಹನದಾಸ್ ಸುವರ್ಣ, ನವೀನ್ ಭಂಡಾರಿ ಹಾಗೂ ಸುಂದರ ಅವಿರೋಧವಾಗಿ ಆಯ್ಕೆಯಾಗಿದ್ದರು.
ಎಸ್..ಎಂ.ರಘು, ಸಹಕಾರ ಸಂಘಗಳ ಸಹಾಯಕ ನಿಬಂದಕರು, ಪುತ್ತೂರು ಉಪ-ವಿಭಾಗ ಇವರು ರಿಟರ್ನಿಂಗ್ ಅಧಿಕಾರಿಯಾಗಿ ಚುನಾವಣೆ ಪ್ರಕ್ರಿಯೆ ನಡೆಸಿದರು.