ಮೈಸೂರು: ಧರ್ಮದ ಬಗ್ಗೆ ಗೌರವ ಇರಬೇಕೇ ಹೊರತು ಮತಾಂಧರಾಗಬಾರದು. ಹಾಗೆಯೇ ಜಾತಿಂು ಬಗ್ಗೆ ಪ್ರೀತಿ ಇರಬೇಕೇ ಹೊರತು ಜಾತಿವಾದಿಂಾಗಬಾರದು ಎಂದು ಮಾಜಿ ಸಚಿವ ರಮಾನಾಥ ರೈ ಅಭಿಪ್ರಾಯಪಟ್ಟರು.
ಬಂಟರ ಸ್ವರ್ಣ ಮಹೋತ್ಸವದ ಅಂಗವಾಗಿ ವಿಜಯನಗರದಲ್ಲಿರುವ ಆಶಾ ಪ್ರಕಾಶ ಶೆಟ್ಟಿ ಬಂಟರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವಿನಯ ಮತ್ತು ಕೆ.ಸುಬ್ರಹ್ಮಣ್ಯ ರೈ’ ಬಯಲು ರಂಗ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜಕಾರಣ ಸುಖದಲ್ಲಿ ಇದೆ ಎಂದು ಭಾವಿಸಿದ್ದೆ. ಆದರೆ ರಾಜಕಾರಣ ಎನ್ನುವುದು ಬಹಳ ಕಷ್ಟವಿದೆ. ಪರಿಸ್ಥಿತಿಗೆ ನಾನು ಎಂದಿಗೂ ರಾಜೀ ಮಾಡಿಕೊಳ್ಳದೇ ಪ್ರಾಮಾಣಿಕವಾಗಿ ಕೆಲಸ ಮಾಡಿರುವ ತೃಪ್ತಿ ಇದೆ. ನನ್ನ ಸಮಾಜಕ್ಕೆ ಅಗೌರವ ತರುವ ಯಾವುದೇ ಒಂದು ಕೆಲಸ ಮಾಡಿಲ್ಲ ಎಂದರು.
ಧರ್ಮ, ಜಾತಿಯ ಬಗ್ಗೆ ಪ್ರೀತಿ, ಗೌರವ ಇರಬೇಕೆ ಹೊರತು, ಮತಾಂಧ ಅಥವಾ ಜಾತಿವಾದಿಗಳಾಗಬಾರದು. ಭ್ರಷ್ಟಾಚಾರ ಮತ್ತು ಕೋಮುವಾದಕ್ಕೆ ನನ್ನ ವಿರೋಧವಿದೆ. ಸಾಮರಸ್ಯದಿಂದ ಬದುಕುವುದು ಈಗ ಮುಖ್ಯ. ಸಾಮಾಜಿಕ ಬದುಕಿನಲ್ಲಿ ಎಲ್ಲ ಜಾತಿ, ಧರ್ಮ, ಭಾಷೆಯ ಜನತೆಗೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಗುಲಗಂಜಿಯಷ್ಟು ತಾರತಮ್ಯ ಮಾಡಿಲ್ಲ. ಶಾಸಕರಾಗುವುದೇ ಎಲ್ಲರಿಗೂ ಸೇವೆ ಸಲ್ಲಿಸಲು ಎಂದರು.
36ನೇ ವಯಸ್ಸಿನಲ್ಲಿ ಶಾಸಕನಾಗಿ ಎರಡು ಬಾರಿ ಸಚಿವನಾಗಿ ಕರ್ತವ್ಯ ನಿರ್ವಹಿಸಿದೆ. ಚುನಾವಣೆಯಲ್ಲಿ ಸೋಲು-ಗೆಲುವು ಕಂಡಿರಬಹುದು. ಆದರೆ, ನನ್ನ ಕರ್ತವ್ಯವನ್ನು ಜವಾಬ್ದಾರಿಯಾಗಿ ನಿಭಾಯಿಸಿರುವ ಸಂತಸವಿದೆ. ನಾನು ಈಗಲೂ ಸಕ್ರಿಯ ರಾಜಕಾರಣಿ ಎಂದು ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಚಂದ್ರಶೇಖರ ಶೆಟ್ಟಿ ಮಾತನಾಡಿ, ವ್ಯಕ್ತಿ ಸಾಧನೆ ನಂತರ ಸವಾಜಕ್ಕೆ ಕೊಡುಗೆ ನೀಡಬೇಕು. 50 ವರ್ಷದಲ್ಲಿ ಬಂಟರ ಸಂಘದಿಂದ ಏನು ವಾಡಿದ್ದೇವೆ, ಮುಂದೆ ಏನು ವಾಡಬೇಕು ಎಂಬುದರ ಬಗ್ಗೆ ಆಲೋಚಿಸಿ, ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಸಂಘ ಮತ್ತಷ್ಟು ಮುಂದೆ ಸಾಗುವ ಕಾರ್ಯ ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಮಾಜಿ ನಿರ್ದೇಶಕ ಡಾ.ಎಸ್.ರಮಾನಂದ ಶೆಟ್ಟಿ, ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತೆ ನಿವ್ಯಾ ಪಿ.ಶೆಟ್ಟಿ, ಉದ್ಯಮಿ ರಾಜೇಶ್ ಶೆಟ್ಟಿ, ನಟರಾದ ಪ್ರಮೋದ್ ಶೆಟ್ಟಿ, ಶೈನ್ ಶೆಟ್ಟಿ, ರಣಜಿ ಆಟಗಾರ ಅಭಿಲಾಷ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಜಿ.ಟಿ.ದೇವೇಗೌಡ, ಮೈಸೂರು ಬಂಟರ ಸಂಘದ ಅಧ್ಯಕ್ಷ ಟಿ.ಪ್ರಭಾಕರ್ ಶೆಟ್ಟಿ, ಎಂಆರ್‌ಐ ಗ್ರೂಪ್ಸ್‌ನ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಮ್ಯಾನೇಜಿಂಗ್ ಟ್ರಸ್ಟಿ ಸತೀಶ್ ಶೆಟ್ಟಿ, ಗೌರವ ಕಾರ್ಯದರ್ಶಿ ಎಂ.ನಂದ್ಯಪ್ಪ ಶೆಟ್ಟಿ, ಸರ್ವೋತ್ತಮ ಶೆಟ್ಟಿ ಇತರರು ಇದ್ದರು.