ಜಿಲ್ಲೆ

ಕರೊನಾ 4ನೇ ಅಲೆ ಬಾರದಿರಲು ಮಾರಮ್ಮ ದೇವಿಗೆ ಕುರಿ ಬಲಿ!

ಮಂಡ್ಯ: ಕರೊನಾ 4ನೇ ಅಲೆ ಬಾರದಿರಲೆಂದು ಗ್ರಾಮಸ್ಥರು ಸೋಂಕು ಮಾರಮ್ಮನ ಮೊರೆ ಹೋಗಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಬಳಿ ಕುರಿ ಬಲಿ ನೀಡಿ ಪೂಜೆ ಮಾಡಲಾಗಿದೆ. ಈ ರೀತಿ ಪೂಜೆ ಮಾಡುವುದರಿಂದ ಕರೊನಾ ಹರಡದಂತೆ ಮಾರಮ್ಮ ದೇವಿ ತಡೆಯುತ್ತಾಳೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.

ಕಾವೇರಿ ನದಿಯಿಂದ ಕಲ್ಲು ತಂದು ಮಣ್ಣಿನಿಂನ ಲೇಪನ ಮಾಡಿ ಮಾರಮ್ಮ ದೇವಿಯ ಪ್ರತಿಷ್ಠಾಪನೆ ಮಾಡಿದ ನಂತರ ಹೊಂಗೆ ಮರದ ಸೊಪ್ಪಿನಿಂದ ಸುಂಕದ ಮಾರಿ ಗುಡಿ ನಿರ್ಮಾಣ ಮಾಡಿ ಪೂಜೆ ಸಲ್ಲಿಸಲಾಯಿತು.

ಮೊದಲ ಹಾಗೂ ಎರಡನೇ ಅಲೆಯಂತೆ ಈಗ 4 ನೇ ಅಲೆಗೂ ಮುನ್ನ ಪೂಜೆ ಮಾಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.