ಮೂಡಲಗಿ: ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಪಾಂಡುರಂಗನ ಭಕ್ತ ಪುಂಡಲೀಕ ಮಹಾರಾಜರ ದೇವಸ್ಥಾನ ನಿರ್ಮಿಸುವ ಮೂಲಕ ಅಖಂಡ ಭಕ್ತಿಯಿಂದ ಮಾನವನು ದೇವನಾಗಬಲ್ಲ ಎಂಬುದಕ್ಕೆ ಗ್ರಾಮಸ್ಥರ ಕಾರ್ಯ ನಿದರ್ಶನವಾಗಿದೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಶ್ರೀ ಪುಂಡಲೀಕ ಮಹಾರಾಜ ದೇವಸ್ಥಾನದ ಬಳಿ ರಾಜ್ಯಸಭೆ ಸದಸ್ಯರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣದಿಂದ ಸಾಮಾಜಿಕ, ಸಾಂಸತಿಕ ಹಾಗೂ ವಿಠ್ಠಲ ಭಜನೆ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ. ಜನರು ಸದುಪಯೋಗ ಪಡಿಸಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಬಸವರಾಜ ಹುಡೇದ, ಸಿದ್ದಾರ್ಥ ಅಥಣಿ, ಮಹಾಂತೇಶ ರೊಡ್ಡನ್ನವರ, ತುಕಾರಾಮ ಬಂಗೇರ, ಈರಯ್ಯ ಮಠದ, ಲ$್ಮಣ ಅಮ್ಮನಗೋಳ, ಚಂದ್ರಗೌಡ ಪಾಟೀಲ, ಮಹಾದೇವ ಕಡಿ, ಬಂಗಾರಪ್ಪ ನನ್ನಾರಿ, ರಾಮಗೌಡ ಪಾಟೀಲ, ವಿಠ್ಠಲ ಪೂಜೇರಿ, ಬಸನಿಂಗಪ್ಪ ಸೋಮನಟ್ಟಿ, ಮಹಾದೇವ ಸುಂಕದ, ಮಹಾದೇವ ದೊಡ್ಡಮನಿ, ಯಂಕಪ್ಪ ನಾಯ್ಕ, ಲ$್ಮವ್ವ ಚವ್ಹಾಣ, ಉದ್ದವ್ವ ಚವ್ಹಾಣ, ಸತ್ಯವ್ವ ಕರಿಕಟ್ಟಿ, ಅಕ್ಕವ್ವ ಗುಡಿ, ಲ್ಮಣ ಸೌಂಸುದ್ದಿ ಇತರರಿದ್ದರು.