ಐಗಳಿ ಗ್ರಾಮದ ಸಿಂಧೂರ ವಸತಿಯ ಅಪ್ಪಯ್ಯ ಸ್ವಾಮಿ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಜಿ.ಐ.ಮುಲ್ಲಾ ಅವರನ್ನು ಸತ್ಕರಿಸಲಾಯಿತು. ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಮಹಾದೇವ ಹಾಲಳ್ಳಿ ಇತರರು ಇದ್ದರು. 
ಜಿಲ್ಲೆ

ಗ್ರಾಮಸ್ಥರ ಒಗ್ಗಟ್ಟಿಗೆ ಜಾತ್ರೆಗಳು ಸಹಕಾರಿ

ಐಗಳಿ: ಒಡೆದು ಹೋದ ಮನಸ್ಸುಗಳು ಒಂದುಗೂಡಲು ಜಾತ್ರೆಗಳು ಪೂರಕ ಎಂದು ತಿಕೋಟಾದ ವಿರಕ್ತಮಠ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಇಲ್ಲಿನ ಸಿಂಧೂರ ವಸತಿಯ ಅಪ್ಪಯ್ಯ ಸ್ವಾಮಿಗಳ ಜಾತ್ರೆ ಅಂಗವಾಗಿ ಶನಿವಾರ ಪ್ರಥಮ ಶಿವಾನುಭವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಕುಟುಂಬದಲ್ಲಿ ಎಲ್ಲರೂ ನಗು ನಗುತ್ತ ಇರುವುದೇ ಸ್ವರ್ಗ. ಹಸಿದ ಹೊಟ್ಟೆಗೆ ಅನ್ನ ನೀಡುವ ಮನೋಭಾವ ಬೆಳೆಸಿಕೊಳ್ಳಿ ಎಂದರು.

ಕನ್ನಾಳ ಹಿರೇಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಲಿಂ.ಅಪ್ಪಯ್ಯ ಸ್ವಾಮೀಜಿ ಪವಾಡ ಪುರುಷರು, ಅನೇಕ ಪವಾಡ ಮಾಡಿ ಶಿವಯೋಗಿಗಳಾದರು. ಲಿಂ. ಮಲ್ಲಪ್ಪ ಶರಣರು ಭವ್ಯ ದೇವಾಲಯ ನಿರ್ಮಿಸಿ ಸ್ವಂತ 2 ಎಕರೆ ಜಮೀನು ಸಾರ್ವಜನಿಕರಿಗೆ ಕೊಟ್ಟ ತ್ಯಾಗ ದೊಡ್ಡದು ಎಂದರು.

ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಮಹಾದೇವ ಹಾಲಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೇವೆಯಿಂದ ನಿವೃತ್ತಿ ಹೊಂದಿದ ಆದರ್ಶ ಶಿಕ್ಷಕ ಜಿ.ಐ.ಮುಲ್ಲಾ ಅವರನ್ನು ಜಾತ್ರಾ ಕಮಿಟಿಯಿಂದ ಸತ್ಕರಿಸಲಾಯಿತು.

ಅಪ್ಪಾಸಾಬ ಪಾಟೀಲ, ಶಿದಗೌಡ ಬಳ್ಳೊಳ್ಳಿ, ಸಿಪಿಐ ಮಲ್ಲಿಕಾರ್ಜುನ ಸಿಂಧೂರ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಹುನ್ನೂರ, ಜಗದೀಶ ತೆಲಸಂಗ, ರಾಜು ವಾಘಮೋರೆ, ನಿಂಗನಗೌಡ ಪಾಟೀಲ, ಶಿವನಿಂಗ ಅರಟಾಳ, ಚನ್ನಪ್ಪ ಸಿಂಧೂರ, ಅಪ್ಪಾಸಾಬ ತೆಲಸಂಗ ಇತರರು ಇದ್ದರು. ಜಗದೀಶ ಕೊರಬು ಸ್ವಾಗತಿಸಿದರು ಕೆ.ಎಸ್.ಬಿರಾದಾರ ನಿರೂಪಿಸಿದರು, ಮಲಗೌಡ ಪಾಟೀಲ ವಂದಿಸಿದರು.