ಜಿಲ್ಲೆ

ಪರಿಸರ ಸ್ವಚ್ಛತೆಗೆ ಗ್ರಾಮಸ್ಥರು ಸಹಕರಿಸಬೇಕು

ಮುನವಳ್ಳಿ: ಸಮೀಪದ ಭಂಡಾರಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಭಂಡಾರಹಳ್ಳಿ ಸರ್ಕಾರಿ ಶಾಲೆಯ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಹಳ್ಳೂರ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಬುಧವಾರ ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು.

ಹಳ್ಳೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು. ಮುರುಘೇಂದ್ರ ಸ್ವಾಮೀಜಿ, ಫಕೀರಪ್ಪ ಚಂದರಗಿ, ಕೃಷ್ಣಾ ಪಾಟೀಲ ಇತರರಿದ್ದರು.

ಬಳಿಕ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕಗಳ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಗ್ರಾ ಪಂ ವತಿಯಿಂದ ಸ್ಥಾಪಿಸಿರುವುದು ಸಂತೋಷ. ಗ್ರಾಮದ ಪರಿಸರವನ್ನು ಸ್ವಚ್ಛವಾಗಿರುವುಸುವಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಗ್ರಾಮಸ್ಥರು ತಮ್ಮ ಸುತ್ತ ಮುತ್ತಲಿನ ಪರಿಸರ ಶುಚಿಯಾಗಿ ಇಡಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಮಂಜುಳಾ ಮುರಗೋಡ, ಉಪಾಧ್ಯಕ್ಷೆ ಶ್ವೇತಾ ಬಿಜಗುಪ್ಪಿ, ಡಿ.ಡಿ.ಟೋಪೋಜಿ, ಗಾಪಂ ಸದಸ್ಯರಾದ ಫಕೀರಪ್ಪ ಚಂದರಗಿ, ಕೃಷ್ಣಾ ಪಾಟೀಲ, ಹನಮಂತಪ್ಪ ಅರಭಾಂವಿ, ಮಾರುತಿ ಮುನವಳ್ಳಿ, ಲಕ್ಷ್ಮೀ ಜೀವಾಪೂರ, ಮಿರಾಜಬಿ ಮಿರ್ಜಿ, ವೌಲಾಸಾಬ್ ಧಾರವಾಡ, ಮಲ್ಲವ್ವ ಮಾದರ, ಜಮಾಲನಾಯ್ಕ ದೊಡಮನಿ, ಪಿಡಿಒ ಬಿ.ಆರ್.ಧಾರವಾಡ ಇತರರಿದ್ದರು.