ಭಾಲ್ಕಿ ತಾಲೂಕಿನ ತಳವಾಡ(ಕೆ) ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ಬಸವ ಜಯಂತಿ ಆಚರಣೆಗೆ ವಿಳಂಬ ಧೋರಣೆ ಮಾಡಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಶರಣಪ್ಪ ರಾಜಾಪುರೆ, ಶಿವಕುಮಾರ ಪಾಟೀಲ್, ರವಿ ಪಾಟೀಲ್, ಜಗನ್ನಾಥ ಪಾಟೀಲ್, ಅಂಬರೀಷ ಇನಾಮತೆ, ಮಹಾದೇವ ಧನ್ನೂರೆ, ಉಮಾಕಾಂತ ಕಮಲಾಪುರೆ, ಸಿದ್ರಾಮ ರಾಜಾಪುರೆ, ಕಾರ್ತಿಕ ಪಿರಶಟ್ಟೆ, ಓಂಕಾರ ಕನಶೆಟ್ಟೆ, ಸಿದ್ದು ಚಾವಳೆ ಇತರರಿದ್ದರು. 
ಜಿಲ್ಲೆ

ಬಸವ ಜಯಂತಿ ಆಚರಣೆ ವಿಳಂಬ ಗ್ರಾಮಸ್ಥರ ಪ್ರತಿಭಟನೆ

ಭಾಲ್ಕಿ: ತಳವಾಡ(ಕೆ) ಗ್ರಾಮ ಪಂಚಾಯತಿ ಕಚೇರಿಯಲ್ಲಿ ಸಮಯನುಸಾರ ಬಸವ ಜಯಂತಿ ಆಚರಣೆ ಮಾಡಿಲ್ಲವೆಂದು ಆರೋಪಿಸಿ ಗ್ರಾಪಂನ ಸದಸ್ಯರು, ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

ಗ್ರಾಪಂ ಕಚೇರಿ ಎದುರು ಶುಕ್ರವಾರ ಕೆಲ ಸದಸ್ಯರು, ಸಾರ್ವಜನಿಕರು ಜಮಾಯಿಸಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕಿತ್ತು. ಆದರೆ ಬೆಳಗ್ಗೆ ೧೦ ಗಂಟೆಯಾದರೂ ಪೂಜೆ ನೆರವೇರಲಿಲ್ಲ. ಜತೆಗೆ ಜಯಂತಿ ಆಚರಣೆ ಬಗ್ಗೆ ಸ್ಥಳೀಯ ಗ್ರಾಪಂ ಸದಸ್ಯರು ಸೇರಿ ಸಾರ್ವಜನಿಕರಿಗೆ ಏಕೆ ಮಾಹಿತಿ ನೀಡಿಲ್ಲ ಎಂದು ಪಂಚಾಯತಿ ಅಧಿಕಾರಿಗಳಿಗೆ ಪ್ರಶ್ನಿಸಿದರು. ಮೇಲಧಿಕಾರಿಗಳು ಭೇಟಿ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ತಾಪ ಅಭಿವೃದ್ಧಿ ಅಧಿಕಾರಿ ಹಣಮಂತರಾವ ಕೌಟಗೆ ಅವರಿಗೆ ಬಸವ ಜಯಂತಿ ಆಚರಣೆಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಪ್ರಮುಖರಾದ ಶರಣಪ್ಪ ರಾಜಾಪುರೆ, ಶಿವಕುಮಾರ ಪಾಟೀಲ್, ರವಿ ಪಾಟೀಲ್, ಜಗನ್ನಾಥ ಪಾಟೀಲ್, ಅಂಬರೀಷ ಇನಾಮತೆ, ಮಹಾದೇವ ಧನ್ನೂರೆ, ಉಮಾಕಾಂತ ಕಮಲಾಪುರೆ, ಸಿದ್ರಾಮ ರಾಜಾಪುರೆ, ಕಾರ್ತಿಕ ಪಿರಶಟ್ಟೆ, ಓಂಕಾರ ಕನಶೆಟ್ಟೆ, ಸಿದ್ದು ಚಾವಳೆ, ಸೋಮನಾಥ ರಾಜಾಪುರೆ, ನಂದು ಚಿಕಲಚಂದೆ, ಸೋಮನಾಥ ಚಿಕಲಚಂದೆ, ಶ್ರಾವಣ ಸೂರ್ಯವಂಶಿ, ನಾಗೇಶ ಗಜರೆ, ಜ್ಯೋತಿಬಾ ಭೋಸ್ಲೆ, ಸಿದ್ದು ಎರನಳ್ಳೆ, ಸಂಗಮೇಶ ಬಾಳೂರೆ, ಬಾಲಾಜಿ ರಾಜಾಪೂರೆ, ಸುನಿಲ ಕನಶೆಟ್ಟೆ ಇತರರಿದ್ದರು.