ಜಿಲ್ಲೆ

ನೀರಿಗಾಗಿ ಟ್ಯಾಂಕ ಮೇಲೆ ಏರಿದ ಗ್ರಾಮಸ್ಥರು

ಗುಳೇದಗುಡ್ಡ: ತಾಲೂಕಿನ ಬೂದಿನಗಡ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕಳೆದ ನಾಲ್ಕು ದಿನಗಳಿಂದ ಪರಿಸ್ಥಿತಿ ಕೈ ಮೀರಿ ಹೋಗಿದೆ.

ಹಳದೂರ ಗ್ರಾಮ ಪಂಚಾಯಿತಿ ವ್ಯಾಪ್ತಿ ಬೂದನಗಡ ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ಆಲಮಟ್ಟಿ ನೀರಿನ ಜಾಕ್​ವೆಲ್​ ದುರಸ್ತಿ ಹಿನ್ನೆಲೆಯಲ್ಲಿ ಕಳೆದ ಆರು ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯ ಬೂದನಗಡ ಗ್ರಾಮದಲ್ಲಿ ಕುಡಿಯಲು ನೀರಿಲ್ಲ. ನಾಲ್ಕೆದು ದಿನಗಳಿಂದ ಈ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದಾರೆ. ನಿತ್ಯ ವಿದ್ಯಾರ್ಥಿಗಳು, ಕೂಲಿಕಾರರು ತಮ್ಮ ಕೆಲಸವನ್ನು ಬಿಟ್ಟು ನೀರಿಗಾಗಿ ಪರದಾಡುವಂತಾಗಿದೆ. ಕೊಳವೆಬಾವಿ ನೀರಿನ ಟ್ಯಾಂಕ್​ ಮುಂದೆ ನೀರಿಗಾಗಿ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ಕೆಲವರಂತೂ ನೀರಿನ ಟ್ಯಾಂಕ್​ ಮೇಲೆ ಏರಿ ನೀರು ತುಂಬಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಕೋಟ್​..

ತಾಂತ್ರಿಕ ತೊಂದರೆಯಿಂದಾಗಿ ಕಳೆದ ನಾಲ್ಕೆದು ದಿನಗಳಿಂದ ಬೂದನಗಡ ಗ್ರಾಮಕ್ಕೆ ಕುಡಿಯವ ನೀರು ಪೂರೈಕೆಯಾಗಿಲ್ಲ. ದನಕರುಗಳಿಗೆ ತೊಂದರೆಯಾಗದಂತೆ ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತಿದೆ. ಗ್ರಾಮಕ್ಕೆ ಟ್ಯಾಂಕ್​ ಮೂಲಕ ನೀರು ಪೂರೈಸಲಾಗುವುದು. ಜಾಕ್​ವೆಲ್​ ದುರಸ್ತಿಗೆ ಮನವಿ ಮಾಡಲಾಗಿದೆ.