ಜಿಲ್ಲೆ

ಹಲವು ಹಳ್ಳಿಗಳ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ; ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿ ಹೇಳಿಕೆ

Raichur

ಮುದಗಲ್ : ಅಡವಿಬಾವಿ, ಕಾಚಾಪುರ, ಗುಂಡಸಾಗರ ಸೇರಿ ವಿವಿಧ ಹಳ್ಳಿಗಳಲ್ಲಿನ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕೆರೆ ನಿರ್ಮಾಣ ಕಾಮಗಾರಿ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಕೆಲ ತಿಂಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು. ವಿವಿಧ ಯೋಜನೆ ಅಡಿ 8.5 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಸಮೀಪದ ಕಾಚಾಪುರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

2018-19ನೇ ಸಾಲಿನ ಪಿಡಬ್ಲುೃಡಿಯ ಅಪೆಂಡಿಕ್ಸ್ ಇ ಯೋಜನೆ ಅಡಿ ಬಂಡಿಸುಂಕಾಪುರ ಕ್ರಾಸ್‌ನಿಂದ ನಾಗರಾಳ ಕೂಡು ರಸ್ತೆಗೆ 1 ಕೋಟಿ ರೂ., 2018-19ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆಯ ನಬಾರ್ಡ್ -24ರ ಯೋಜನೆ ಮತ್ತು 2018-19ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆ ಅಡಿ ಮುದಗಲ್-ಆನೆಹೊಸೂರು, ಕಾಚಾಪುರ ಗುಂಡಸಾಗರ ರಸ್ತೆ ಸುಧಾರಣೆ 3.5 ಕೋಟಿ ರೂ., 2018-19ನೇ ಸಾಲಿನ ಪಿಡಬ್ಲುೃಡಿಯ ಅಪೆಂಡಿಕ್ಸ್ ಇ ಯೋಜನೆಯಡಿ ಅಡವಿಬಾವಿ-ಮುದಗಲ್ ರಸ್ತೆ ಸುಧಾರಣೆಗೆ 2 ಕೋಟಿ ರೂ., 2018-19ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯಡಿ ಹಿರೇಯರದಿಹಾಳ -ಬನ್ನಿಗೋಳ ರಸ್ತೆ ಸುಧಾರಣೆಗೆ 2 ಕೋಟಿ ರೂ. ಬಿಡುಗಡೆಯಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು ಎಂದರು. ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖದಾವೂದ್‌ಸಾಬ್, ಕಾರ್ಯಾಧ್ಯಕ್ಷ ಶಿವಶಂಕರಗೌಡ ಗೌಡರ್, ಎಪಿಎಂಸಿ ಅಧ್ಯಕ್ಷ ಜಂಬನಗೌಡ, ಮುಖಂಡರಾದ ಮಹಾಂತೇಶ ಪಾಟೀಲ್ ಇತರರಿದ್ದರು.