ಜಿಲ್ಲೆ

ಯೋಗ್ಯರಿಗೆ ಮತ ಹಾಕಿ ಗೆಲ್ಲಿಸಿ

Chitradurga - Desk - Suresh lamani

ಜಗಳೂರು: ಅಂಬೇಡ್ಕರ್ ದೇಶದ ಪ್ರತಿ ಪ್ರಜೆಗೆ ಮತದಾನದ ಹಕ್ಕನ್ನು ನೀಡಿದ್ದಾರೆ. ಯೋಗ್ಯರಿಗೆ ಮತ ಚಲಾಯಿಸುವ ಮೂಲ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸೋಣ ಎಂದು ಕೆಪಿಸಿಸಿ ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ ಹೇಳಿದರು.

ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಆಯೋಜಿಸಿದ್ದ ನೂತನ ಗ್ರಾಮ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕೆ ದಲಿತ ಸಂಘಟನೆಗಳು ಹುಟ್ಟಿಕೊಂಡಿವೆ ಎಂದರು.

ದಸಂಸ ತಾಲೂಕಾಧ್ಯಕ್ಷ ಮಾಲೆಮಾಚಿಕೆರೆ ಬಿ. ಸತೀಶ್ ಮಾತನಾಡಿ, ನಾವು ಶಿಕ್ಷಣವಂತರಾಗಿ ಸಂಘಟನೆಗಳನ್ನು ಗಟ್ಟಿಗೊಳಿಸಿ, ಅನ್ಯಾಯ ಕಂಡಾಗ ಹೋರಾಟದ ಮೂಲಕ ಅದನ್ನು ಖಂಡಿಸಬೇಕು. ಪ್ರತಿ ಹಳ್ಳಿ ಒಗ್ಗಟ್ಟಾಗಿ ಏಳ್ಗೆ ಹೊಂದಲು ದಸಂಸ ಗ್ರಾಮ ಶಾಖೆಗಳು ಅನಿವಾರ್ಯ ಎಂದು ತಿಳಿಸಿದರು.

ದಸಂಸ ಜಿಲ್ಲಾಧ್ಯಕ್ಷ ಹೂವಿನಮಡುಗು ಅಂಜಿನಪ್ಪ ಮಾತನಾಡಿ, ಸಾಮಾಜಿಕ ಬದಲಾವಣೆಗಾಗಿ, ಸಮಾಜದ ಅನ್ಯಾಯವನ್ನು ಪ್ರಶ್ನಿಸುವುದಕ್ಕಾಗಿ ಇಂತಹ ಸಂಘಟನೆಗಳು ಸ್ಥಾಪನೆಯಾಗಬೇಕು ಎಂದರು.

ಪ್ರಾಚಾರ್ಯ ನಾಗಲಿಂಗಪ್ಪ ಮಾತನಾಡಿ, ಸಾಮಾಜಿಕ ಬದಲಾವಣೆಯ ಬಗ್ಗೆ ವಿಚಾರಗಳನ್ನೂ ಸಾರಿದ ಅನೇಕ ಮಹನೀಯರನ್ನು ನಾವು ಜಾತಿಗೆ ಸೀಮಿತಗೊಳಿಸಿರುವುದು ವಿಷಾದನೀಯ ಎಂದು ಹೇಳಿದರು.

ಕರ್ನಾಟಕ ನವನಿರ್ವಣ ವೇದಿಕೆ ಅಧ್ಯಕ್ಷ ಜೆ. ಮಹಾಲಿಂಗಪ್ಪ ಮಾತನಾಡಿ, ಎಲ್ಲಿ ಜನಾಂಗ, ಜಾತಿ- ಧರ್ಮ ಭೇದ ಮರೆತು ಭಾವೈಕ್ಯದಿಂದ ಜೀವಿಸುತ್ತಾರೆಯೋ ಅಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದರು.

ಪತ್ರಕರ್ತ ಧನ್ಯಕುಮಾರ್, ಬಿಜೆಪಿ ಯುವ ಮುಖಂಡ ಬಿಸ್ತುವಳ್ಳಿ ಬಾಬು, ಕೆಪಿಸಿಸಿ ಎಸ್ಟಿ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಕೀರ್ತಿಕುಮಾರ್ ಮಾತನಾಡಿದರು.

ಜಿಲ್ಲಾ ಸಂಘಟನಾ ಸಂಚಾಲಕರಾದ ರಾಮಚಂದ್ರಪ್ಪ ಗುಮ್ಮನೂರು, ಪ್ರಶಾಂತ್, ದಸಂಸ ನಗರ ಘಟಕ ಅಧ್ಯಕ್ಷ ಕರಿಬಸಪ್ಪ, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಕಾಂಗ್ರೆಸ್ ಜಿಪಂ ಆಕಾಂಕ್ಷಿ ರುದ್ರೇಶ್ ಗುತ್ತಿದುರ್ಗ, ದಸಂಸ ಸಂಘಟನಾ ಸಂಚಾಲಕರಾದ ಉಮೇಶ್ ಎಚ್.ಎಂ. ಹೊಳೆ, ಜಗಜೀವನ್​ರಾಮ್ ಶಿವಕುಮಾರ್ ಅಸಗೋಡು, ಕಾಂಗ್ರೆಸ್ ಯುವ ಮುಖಂಡ ವಿಜಯ್ ಕೆಂಚೋಳ್, ಗ್ರಾಮದ ಮುಖಂಡರಾದ ಪರಶುರಾಮ್ ಮೈಲಪ್ಪ, ಶಿವಲಿಂಗಪ್ಪ ಮತ್ತಿತರರಿದ್ದರು.