ತಡಕಲ್‌ನಲ್ಲಿ ರಸ್ತೆ ಕಾಮಗಾರಿಗೆ ಸಚಿವ ಎನ್.ಎಸ್.ಬೋಸರಾಜು ಭಾನುವಾರ ಚಾಲನೆ ನೀಡಿದರು. ಶಾಸಕ ಹಂಪಯ್ಯ ನಾಯಕ, ಪ್ರಮುಖರಾದ ಬಿ.ಕೆ.ಅಮರೇಶಪ್ಪ, ರುದ್ರಪ್ಪ ಅಂಗಡಿ, ಪ್ರವೀಣ ಕುಮಾರ, ಶ್ರೀಶೈಲಗೌಡ, ದೇವೇಂದ್ರಪ್ಪ, ಮಲ್ಲಯ್ಯ ಇತರರಿದ್ದರು. 
ಜಿಲ್ಲೆ

ಹಳ್ಳಿ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧ

Kopala - Desk - Eraveni

ಕವಿತಾಳ: ಮಾನ್ವಿ ತಾಲೂಕಿನ ತಡಕಲ್ ಗ್ರಾಮದಲ್ಲಿ ಪಿಎಂಜಿಎಸ್‌ವೈ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ತಡಕಲ್‌ನಿಂದ ತಡಕಲ್ ಕ್ರಾಸ್‌ವರೆಗೆ ಕೈಗೊಂಡಿರುವ ರಸ್ತೆ ಕಾಮಗಾರಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಭಾನುವಾರ ಚಾಲನೆ ನೀಡಿದರು.

ನಂತರ ಮಾತನಾಡಿ, ಸರ್ಕಾರ ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಬದ್ಧವಾಗಿದೆ. ತಡಕಲ್ ರಸ್ತೆ ಹದಗೆಟ್ಟು ಸಂಚಾರಕ್ಕೆ ತೊಂದರೆಯಾಗಿತ್ತು. ರೈತರಿಗೆ ಅನುಕೂಲವಾಗಲಿ ಎಂದು ರಸ್ತೆ ದುರಸ್ತಿಗೊಳಿಸಲಾಗುತ್ತಿದೆ. ತಡಕಲ್‌ನಿಂದ ತಡಕಲ್ ಕ್ರಾಸ್‌ವರೆಗೆ 7.7 ಕಿಮೀ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ.

ಸಾರ್ವಜನಿಕರು ಗುಣಮಟ್ಟದಿಂದ ರಸ್ತೆ ಮಾಡಿಸಿಕೊಳ್ಳಬೇಕು ಎಂದರು. ಶಾಸಕ ಹಂಪಯ್ಯ ನಾಯಕ, ಪ್ರಮುಖರಾದ ಬಿ.ಕೆ.ಅಮರೇಶಪ್ಪ, ರುದ್ರಪ್ಪ ಅಂಗಡಿ, ಪ್ರವೀಣ ಕುಮಾರ, ಶ್ರೀಶೈಲಗೌಡ, ಶರಣಯ್ಯ ನಾಯಕ ಗುಡದೂರು, ದೇವೇಂದ್ರಪ್ಪ, ರಾಮನಗೌಡ, ಸಿದ್ದಲಿಂಗಪ್ಪ, ಮಲ್ಲಯ್ಯ, ಅಶೋಕ ತಡಕಲ್, ವೀರನಗೌಡ, ಅಚ್ಯುತ್‌ರಾಯ, ಕರಿಯಪ್ಪ, ಅಯ್ಯನಗೌಡ ಇತರರಿದ್ದರು.