ಹರಪನಹಳ್ಳಿ ತಾಪಂ ಎದುರು ಗ್ರಾಕೂಸ್ ಸಂಘಟನೆಯಿಂದ ನಿವೇಶಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಇಒ ಕೆ.ಆರ್.ಪ್ರಕಾಶ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಕೊಗಳಿ ಮಲ್ಲಿಕಾರ್ಜುನ, ಬಿ.ಭಾಗ್ಯಮ್ಮ, ಇ.ಹಾಲಮ್ಮ, ಪರಶುರಾಮ, ಮಲ್ಲಮ್ಮ, ನೀಲಮ್ಮ, ಯಶೋಧ, ಪಾರ್ವತಿ, ಸುಮಾ, ರೇಣುಕಾ ಇತರರಿದ್ದರು. 
ಜಿಲ್ಲೆ

ಗ್ರಾಮ ಸಭೆ ಮೂಲಕ ನಿವೇಶನ ಹಂಚಿಕೆ ಮಾಡಿ

ರುದ್ರಪ್ಪ ವಾಲಿ

ಹರಪನಹಳಿ: ಅರ್ಹ ಬಡವರಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ತಾಪಂ ಎದುರು ಗುರುವಾರ ಪ್ರತಿಭಟನೆ ನಡೆಸಿ ಇಒ ಕೆ.ಆರ್.ಪ್ರಕಾಶ್‌ಗೆ ಗುರುವಾರ ಮನವಿ ಸಲ್ಲಿಸಿತು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದ್ದು, ತಾಪಂ ಹಾಗೂ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನೇಕ ಬಡವರಿಗೆ ನಿವೇಶನ ರಹಿತರಿಗೆ ಮನೆ ಇಲ್ಲದಂತಾಗಿದೆ. ವಾಸ ಮಾಡಲು ಸ್ಥಳ ಸಿಗದಂತಾಗಿದೆ. ಅಲ್ಲದೇ ಇಲ್ಲಿಯವರೆಗೂ ಯಾವುದೇ ಗ್ರಾಮ ಸಭೆ ಮಾಡದೆ ಹಂಚಿಕೆ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಬಾಡಿಗೆ ಮನೆಗಳಲ್ಲಿ ವಾಸ

ತಾಲೂಕಿನಲ್ಲಿ ಅನೇಕರು ನಿವೇಶನ ರಹಿತರಿದ್ದು, ಕನಿಷ್ಠ ನಿವೇಶನವಿದ್ದಲ್ಲಿ ಗುಡಿಸಲನ್ನಾದರೂ ನಿರ್ಮಾಣ ಮಾಡಿಕೊಳ್ಳುತ್ತೇವೆ. ಇನ್ನು ಅನೇಕ ಹಳ್ಳಿಗಳಲ್ಲಿ ಮನೆ, ನಿವೇಶನವಿಲ್ಲದೆ ಅವಿಭಕ್ತ ಕುಟುಂಬದಿಂದ ಬೇರ್ಪಟ್ಟು ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ ಎಂದರು.

ತಾಲೂಕಿನ ಸಿಂಗ್ರಿಹಳ್ಳಿ, ಕಂಚಿಕೇರಿ, ಸಾಸ್ವಿಹಳ್ಳಿ, ಮೈದೂರು, ತೊಗರಿಕಟ್ಟಿ ಹಾಗೂ ಇತರೆ ಗ್ರಾಪಂ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಭೂಮಿ ಇದ್ದರೂ ನಿವೇಶನ ಹಂಚಿಕೆ ಮಾಡುತ್ತಿಲ್ಲ. ಕೂಡಲೇ ಗ್ರಾಮ ಸಭೆ ಮೂಲಕ ಹಂಚಿಕೆ ಮಾಡುವಂತೆ ಆಗ್ರಹಿಸಿದರು.