ಜಿಲ್ಲೆ

ಗ್ರಾಮಾಭಿವೃದ್ಧಿ ಯೋಜನೆ ತ್ರೈಮಾಸಿಕ ಸಭೆ

Avinash R

ಕಡಬ: ಬಿಳಿನೆಲೆ ವಲಯದ ಹನ್ನೆರಡು ಒಕ್ಕೂಟಗಳ ಪೈಕಿ ಕೋಣಾಜೆ ಒಕ್ಕೂಟ ಶಿಸ್ತುಬದ್ಧ ಸಭೆ ನಡೆಸುವುದರ ಪರಿಣಾಮವಾಗಿ ಸಂಘಗಳ ಗುಣಮಟ್ಟದಲ್ಲಿ ಹಾಗೂ ಆರ್ಥಿಕ ವ್ಯವಹಾರದಲ್ಲಿ ಗುಣಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಹೇಳಿದರು.

ದುರ್ಗಾಂಬಿಕಾ ಭಜನಾ ಮಂದಿರದಲ್ಲಿ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಬಿಳಿನೆಲೆ ವಲಯದ ಕೋಣಾಜೆ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.

ಡೀಕಯ್ಯ ಗೌಡ ಹಾಕೊಟೆಕಾನ ಅಧ್ಯಕ್ಷತೆ ವಹಿಸಿದ್ದರು. ಸೇವಾಪ್ರತಿನಿಧಿ ಬೇಬಿ, ಪದಾಧಿಕಾರಿಗಳಾದ ಕುಸುಮಾವತಿ ದೊಡ್ಡಮನೆ, ಜಯಪ್ರಸಾದ್ ಕಲ್ಲೂರು ಉಪಸ್ಥಿತರಿದ್ದರು. ಕೇಶವ ಕಲ್ಲೂರು ಸ್ವಾಗತಿಸಿ, ಕುಸುಮಾವತಿ ಎಸ್.ಕೆ.ವಂದಿಸಿದರು. ಒಕ್ಕೂಟ ಕಾರ್ಯದರ್ಶಿ ವೆಂಕಟ್ರಮಣ ಗೌಡ ಅಲ್ನ ನಿರೂಪಿಸಿದರು.