ಹುಣಶ್ಯಾಳ ಪಿಜಿ ಗ್ರಾಮದಲ್ಲಿ ರಾಜಾಪುರ ಗ್ರಾಮಸ್ಥರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ವಿಠ್ಠಲ ಪಾಟೀಲ, ಭೈರಪ್ಪ ಯಕ್ಕುಂಡಿ, ಶಿವಾನಂದ ಕಮತಿ, ರಾಮಚಂದ್ರ ಪಾಟೀಲ ಇತರರಿದ್ದರು. 
ಜಿಲ್ಲೆ

ಎಲ್ಲರ ಒಗ್ಗಟ್ಟಿನಿಂದ ಗ್ರಾಮಾಭಿವೃದ್ಧಿ ಸಾಧ್ಯ

ಪ್ರಶಾಂತ ಹೂಗಾರ

ಮೂಡಲಗಿ: ಗ್ರಾಮದ ಹಿರಿಯರು ಒಗ್ಗಟ್ಟಿನಿಂದ ರಾಜಾಪುರ ಅಭಿವೃದ್ಧಿಗೆ ಕಂಕಣಬದ್ಧರಾಗಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರರಾಗಿರುವುದು ಶ್ಲಾಘನೀಯ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತ ಹಿನ್ನೆಲೆಯಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಾಜಾಪುರ ಗ್ರಾಪಂನಂತೆ ಇತರ ಗ್ರಾಪಂಗಳು ಕಾರ್ಯನಿರ್ವಹಿಸಬೇಕು. ಗ್ರಾಮದ ಜನತೆಗೆ ಕುಡಿಯುವ ನೀರು, ಒಳಚರಂಡಿ, ರಸ್ತೆ, ಬೀದಿ ದೀಪ, ಶೌಚಗೃಹ ಮೂಲಸೌಕರ್ಯ ಒದಗಿಸಬೇಕು. ಸರ್ಕಾರದ ಅನೇಕ ಸೌಲಭ್ಯ ಜನರಿಗೆ ದೊರಕಿಸಿಕೊಡಬೇಕು.

ಸದಾ ಒಗ್ಗಟ್ಟಿನ ಮಂತ್ರ ಜಪಿಸುವ ಮೂಲಕ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಹಿರಿಯರು ಪರಿಹರಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು. ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಭೈರಪ್ಪ ಯಕ್ಕುಂಡಿ, ಶಿವಾನಂದ ಕಮತಿ, ರಾಮಚಂದ್ರ ಪಾಟೀಲ, ಬಸವರಾಜ ಪಂಡ್ರೊಳ್ಳಿ, ಕೆಂಪಣ್ಣ ಗಡಹಿಂಗ್ಲಜ್, ವಾಸಪ್ಪ ಪಂಡ್ರೊಳ್ಳಿ, ನಾಗಪ್ಪ ಕಟ್ಟಿಕಾರ, ಮಹಾದೇವ ವಗ್ಗ, ಪಿಡಿಒ ಉದಯಕುಮಾರ ಬೆಳ್ಳುಂಡಗಿ ಇತರರಿದ್ದರು.