ಜಿಲ್ಲೆ

ಕ್ರಿಯಾಶೀಲ ಕಾರ್ಯಕರ್ತನಿಂದ ಗ್ರಾಮಾಭಿವೃದ್ಧಿ ಸಾಧ್ಯ

ಬಸವರಾಜ ವೀರಪ್ಪ ಗರಗ

ಶಿರಸಿ: ಅಭಿವೃದ್ಧಿ ಎಂದಿಗೂ ನಿಂತ ನೀರಾಗಬಾರದು. ಅದು ಸದಾ ಕಾರ್ಯರೂಪದಲ್ಲಿದ್ದಾಗ ಮಾತ್ರ ಪ್ರತಿ ಹಳ್ಳಿ ಪ್ರಗತಿಯತ್ತ ಹೆಜ್ಜೆ ಇಡಲು ಸಾಧ್ಯ ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಗ್ರಾಮದ ಅಭಿವೃದ್ಧಿ ಆಯಾ ಕ್ಷೇತ್ರದ ಕ್ರಿಯಾಶೀಲ ಕಾರ್ಯಕರ್ತರಿಂದ ಮಾತ್ರ ಸಾಧ್ಯ. ಒಬ್ಬ ಜನಪ್ರತಿನಿಧಿಯಾದವನು ಯಾವುದೇ ಭೇದ-ಭಾವವಿಲ್ಲದೆ ನ್ಯಾಯಸಮ್ಮತವಾಗಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದರೆ ಅಂತವರನ್ನು ಜನರು ಸದಾ ಸ್ಮರಿಸುತ್ತಾರೆ ಎಂದರು.
ಬಿಸಲಕೊಪ್ಪ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು 18 ಕೋಟಿಗಿಂತಲೂ ಹೆಚ್ಚಿನ ಅನುದಾನ ತರುವ ಮೂಲಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನೂಮುಂದೆಯೂ ಈ ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತೇನೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘು ನಾಯ್ಕ ಮಾತನಾಡಿ, ಬಿಸಲಕೊಪ್ಪ ಗ್ರಾಮದಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆ ಮಾರುಕಟ್ಟೆಗೆ ಒಂದು ಸುಸಜ್ಜಿತವಾದ ವ್ಯವಸ್ಥೆ ಕಲ್ಪಿಸಲು ಅನುದಾನ ನೀಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಗ್ರಾಪಂ ಉಪಾಧ್ಯಕ್ಷ ನರೇಂದ್ರ ಶಾಸ್ತ್ರಿ, ಸದಸ್ಯರಾದ ಮಂಜು ನಾಯ್ಕ, ವಿದ್ಯಾಧರ ಭಟ್, ಶೋಭಾ ಗೌಡ, ಫ್ರಾನ್ಸಿಸ್ ಫನಾರ್ಂಡಿಸ್,ನೇತ್ರಾವತಿ ವಡ್ಡರ್, ಪಿಡಿಒ ಪರಶುರಾಮ ಮಲವಳ್ಳಿ, ತಾಪಂ ಇಒ ದೇವರಾಜ ಹಿತ್ಲಕೊಪ್ಪ ಇತರರಿದ್ದರು.