ಜಿಲ್ಲೆ

ಗ್ರಾಮಸಭೆಯಿಂದ ಗ್ರಾಮಾಭಿವೃದ್ಧಿ

ನರಸಾಪುರ: ಗ್ರಾಮ ಸಭೆಯ ಪರಿಕಲ್ಪನೆಯೇ ಗ್ರಾಮಾಭಿವೃದ್ಧಿಯಾಗಿದ್ದು, ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಸಭೆಯಲ್ಲಿ ಅಥವಾ ಪಂಚಾಯಿತಿಗೆ ಬಂದು ತಿಳಿಸಿದಾಗ ಶ್ರೀ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನರಸಾಪುರ ಗ್ರಾಪಂ ಪಿಡಿಒ ಎಂ.ಮುನಿರಾಜು ತಿಳಿಸಿದರು.

ಕೋಲಾರ ತಾಲೂಕು ನರಸಾಪುರ ಗ್ರಾಪಂ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ, ಮಹಿಳೆಯರ ಮತ್ತು ಅಂಗವಿಕಲರ ಗ್ರಾಮಸಭೆಯಲ್ಲಿ ಮಾತನಾಡಿ, ಹಲವು ಯೋಜನೆ ಮೂಲಕ ಸಾರ್ವಜನಿಕರು ಮತ್ತು ಪಂಚಾಯಿತಿ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡುತ್ತಿದ್ದು, ಕ್ರಿಯಾ ಯೋಜನೆ ರೂಪಿಸಿಕೊಂಡು ಅಭಿವೃದ್ಧಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ನರಸಾಪುರದಲ್ಲಿ ಬೆಸ್ಕಾಂ ಇಲಾಖೆಯ ನೌಕರರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮುರಿದ ಕಂಬಗಳು ಮತ್ತು ತುಗಾಡುತ್ತಿರುವ ಲೈನ್​ಗಳನ್ನು ಬದಲಾವಣೆ ಮಾಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಪಂ ಅಧ್ಯಕ್ಷ, ಸದಸ್ಯರು ಆರೋಪಿಸಿದರು. ಹಾಜರಿದ್ದ ಅಧಿಕಾರಿ ಎಲ್ಲ ಕೆಲಸ ಮಾಡಿ ಮುಗಿಸುತ್ತೇನೆ ಎಂದು ಭರವಸೆ ನೀಡಿದರು.

ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಸದಾಗಿ ಬಂದಿರುವ ವೈದ್ಯರ ರ್ನಿಲಕ್ಷ$್ಯ ಹೆಚ್ಚಾಗಿದ್ದು, ರಾತ್ರಿ ಪಾಳಯದಲ್ಲಿ ವೈದ್ಯರ ನೇಮಕಾತಿ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದರು. ಸಭೆಯಲ್ಲಿ ಆರೋಗ್ಯ ಅಧಿಕಾರಿ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಗ್ರಾಮದಲ್ಲಿ ಜಲಜೀವನ್​ ಮಿಷನ್​ ಯೋಜನೆಯಿಂದ ಹಲವು ತೊಂದರೆಗಳಾಗುತ್ತಿದ್ದು, ಕಾಮಗಾರಿಗಾರಿ ಅಗೆದ ರಸ್ತೆಗಳು ಇಂದು ಕಾಲುವೆಗಳಾಗಿ ಮಾರ್ಪಟ್ಟಿವೆ. ಗುತ್ತಿಗೆದಾರರು ಆಮೆಗತಿಯಲ್ಲಿ ಕಾಮಗಾರಿ ಮಾಡುತ್ತಿದ್ದು, ಮಳೆಗಾಲದಲ್ಲಂತೂ ಬಹಳ ಕಷ್ಟವಾಗುತ್ತದೆ. ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿಗೆ ಒತ್ತಾಯಿಸಿದರು.

ಆಧಾರ್​ ಕಾರ್ಡ್​ ತಿದ್ದುಪಡಿ, ವಂಶವೃಕ್ಷ ದಾಖಲೆ, ಖಾತೆ ಬದಲಾವಣೆ ಮಹಜರುಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ತಿಳಿಸಿದರು.

ತಾಪಂ ಮಾಜಿ ಸದಸ್ಯ ಎನ್​.ಕೆ.ನಾಗರಾಜ್​, ನಿವೃತ್ತ ಮುಖ್ಯ ಶಿಕ್ಷಕ ಬಿ. ಶ್ರೀನಿವಾಸ್​, ಪಶು ಸಂಗೋಪನ ಇಲಾಖೆ ಡಾ.ಮಂಜುನಾಥ್​, ಬೆಸ್ಕಾಂ ಇಲಾಖೆ ಇಂಜಿನಿಯರ್​ ವೆಂಕಟಕೋಟಿ ರೆಡ್ಡಿ, ಆರೋಗ್ಯ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೇಮಾ ಮತ್ತು ಗೀತಾ, ಕೆ.ಪಿ.ಎಸ್​ ಶಾಲೆಯ ಮುಖ್ಯಶಿಕ್ಷಕರಾದ ಗೋಪಿನಾಥ್​ ಮತ್ತು ಭಾರತಿ, ಕಾಜಿಕಲ್ಲಳ್ಳಿ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್​, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಇಂಜಿನಿಯರ್​ ಸಾಹೇಬ್​ ಗೌಡ, ವಿಎಒ ರಮ್ಯಾ ಇದ್ದರು.

ನೀರಿನ ಸಮಸ್ಯೆ

ವಿದ್ಯಾರ್ಥಿ ಮನವಿ

ಸಭೆಯಲ್ಲಿ ವಿದ್ಯಾರ್ಥಿಯೊಬ್ಬ ನೀರಿನ ಸಮಸ್ಯೆ ಹಾಗೂ ವಾಹನ ಸಮಸ್ಯೆ ಬಗ್ಗೆ ಸಭೆಯಲ್ಲಿ ಧ್ವನಿ ಎತ್ತಿದ್ದರಿಂದ ಕರ್ನಾಟಕ ಪಬ್ಲಿಕ್​ ಶಾಲೆ, ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ಕುಡಿಯುವ ನೀರು ಮತ್ತು ಅಡುಗೆಗೆ ನೀರಿನ ಸಮಸ್ಯೆ ಕುರಿತು ಸಭೆಯ ಗಮನ ಸೆಳೆದರು. ಅದನ್ನು ಪಂಚಾಯಿತಿ ಗಮನಕ್ಕೆ ಯಾಕೆ ತರಲಿಲ್ಲ ಎಂದು ಮುಖ್ಯಶಿಕ್ಷಕರಿಗೆ ಪ್ರಶ್ನಿಸಿದರು.