ಜಿಲ್ಲೆ

ನಾಲ್ಕು ಗ್ರಾಮ ಸಹಾಯಕ ಹುದ್ದೆ ಖಾಲಿ: ಮಂಡ್ಯ ತಾಲೂಕಿನ ಎಲ್ಲೆಲ್ಲಿದೆ ಅವಕಾಶ?

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ಕೊತ್ತತ್ತಿ ಹೋಬಳಿಯ ಸೂನಗನಹಳ್ಳಿ, ಬೇವಿನಹಳ್ಳಿ ವೃತ್ತ, ಬಸರಾಳು ಹೋಬಳಿಯ ಮುತ್ತೇಗೆರೆ ಮತ್ತು ಕಸಬಾ ಹೋಬಳಿಯ ಮಂಡ್ಯ ವೃತ್ತದ ನಾಲ್ಕು ಗ್ರಾಮ ಸಹಾಯಕ ಹುದ್ದೆಗಳು ಖಾಲಿ ಇದೆ. ಇದನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು ಚೆನ್ನಾಗಿ ಓದಲು ಹಾಗೂ ಬರೆಯಲು ಬರುವವರ ವಿದ್ಯಾವಂತರಾಗಿರಬೇಕು. ಖಾಲಿ ಇರುವ ಗ್ರಾಮ ಸಹಾಯಕ ಹುದ್ದೆಯ ವೃತ್ತಗಳ ನಿವಾಸಿಯಾಗಿದ್ದು, ಕೇಂದ್ರ ಸ್ಥಾನದಲ್ಲಿಯೇ ವಾಸವಾಗಿರಬೇಕು. ಗ್ರಾಮ ಸಹಾಯಕ, ತಳವಾರರು, ತೋಟಿ, ನೀರುಗಂಟಿ, ವಾಲಿಕರ್ಸ್‌, ಮಹರ್ಸ್‌, ಬರ್‌ಕರ್ಸ್‌, ತಳಾರಿಸ್, ಸೇತ್ ಸಂದೀಸ್, ನೀರಾಡಿಗಳು, ಬಲೂತಿದಾರ್ಸ್‌, ವೆಟ್ಟಿ, ಉರ್‌ಗಾನಿನ್ಸ್ ಹಾಗೂ ಕುಳವಾಡಿಕೆ ಕುಟುಂಬ ವರ್ಗದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಅರ್ಜಿದಾರರಿಗೆ ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಟ 25 ವರ್ಷ ವಯಸ್ಸಾಗಿರಬೇಕು. ಅರ್ಹ ಅಭ್ಯರ್ಥಿಗಳು ಮಾ.7ರಂದು ಸಂಜೆ 5.30ರೊಳಗೆ ತಾಲೂಕು ಕಚೇರಿಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.