ಲಿಂಗಸುಗೂರು: ಮುದಗಲ್ ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮ ಸಭೆ ನಡೆಸುವಂತೆ ಒತ್ತಾಯಿಸಿ ತಾಪಂ ಕಚೇರಿ ಎಫ್‌ಡಿಸಿ ಮಂಜನಾಥಗೆ ಕ್ರೈ ಕನ್ಸೆಂಟ್ ಮತ್ತು ಜಿಲ್ಲಾ ಶೃತಿ ಸಂಸ್ಕೃತಿ ಸಂಸ್ಥೆ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.
ಹೂನೂರು, ಬನ್ನಿಗೋಳ, ಉಪ್ಪಾರ ನಂದಿಹಾಳ, ಆಮದಿಹಾಳ ಗ್ರಾಪಂನಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಸಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ ಮಕ್ಕಳ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಒತ್ತಾಯಿಸಿದರು.