ಜಿಲ್ಲೆ

ಬೆಳಗಾವಿ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಬೆಳಗಾವಿ: ಬೆಳಗಾವಿ ಪತ್ರಕರ್ತರ ಸಂಘದ (ಮುದ್ರಣ ಮಾಧ್ಯಮ) ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ವಿಲಾಸ ಜೋಶಿ, ಉಪಾಧ್ಯಕ್ಷರಾಗಿ ಶ್ರೀಶೈಲ ಮಠದ, ಸಂಜಯ ಸೂರ್ಯವಂಶಿ, ಗೌರವಾಧ್ಯಕ್ಷರಾಗಿ ಹೃಷಿಕೇಶ ಬಹದ್ದೂರ ದೇಸಾಯಿ, ಗೌರವ ಸಲಹೆಗಾರರಾಗಿ ಕೇಶವ ಆದಿ, ಕೆ.ಸುರೇಶ, ಮಹೇಶ ವಿಜಾಪುರ, ಕಾರ್ಯದರ್ಶಿಯಾಗಿ ನೌಷಾದ ಬಿಜಾಪುರ, ಸಹಾಯಕ ಕಾರ್ಯದರ್ಶಿಯಾಗಿ ಸುರೇಶ ನೇರ್ಲಿ, ಖಜಾಂಚಿಯಾಗಿ ರವಿ ಉಪ್ಪಾರ, ಕಾರ್ಯಕಾರ್ಯಣಿ ಸದಸ್ಯರಾಗಿ ರಾಜು ಗವಳಿ, ಮಲ್ಲಿಕಾರ್ಜುನ ಮುಗಳಿ, ಸಂತೋಷ ಚಿನಗುಡಿ, ಕೀರ್ತಿ ಕಾಸರಗೂಡು, ಮುನ್ನಾ ಭಗವಾನ, ಮಂಜುನಾಥ ಕೋಳಿಗುಡ್ಡ, ಸುನೀಲ್ ಪಾಟೀಲ, ಜಗದೀಶ ವಿರಕ್ತಮಠ, ರಾಜಶೇಖರಯ್ಯ ಹಿರೇಮಠ, ವಿನಾಯಕ ಮಠಪತಿ, ರವಿ ಗೋಸಾವಿ, ಅಶೋಕ ಮುದ್ದಣ್ಣವರ, ಅರುಣ ಯಳ್ಳೂರಕರ, ರಾಮಚಂದ್ರ ಸುಣಗಾರ, ರಜನಿಕಾಂತ ಯಾದವಾಡ ಅವಿರೋಧವಾಗಿ ಆಯ್ಕೆಗೊಂಡರು.

ಇದೇ ಸಮಯದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮದ ವರದಿಗಾರಿಕೆ ಹಿನ್ನೆಲೆ ರಾಜ್ಯ ಸರ್ಕಾರದ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತರ ನೌಷಾದ ಬಿಜಾಪುರ ಅವರನ್ನು ಗೌರವಿಸಲಾಯಿತು.ನಾಗರಾಜ ಎಚ್.ವಿ., ಹಿರಾಮಣಿ ಕಂಗ್ರಾಳಿಕರ ಸೇರಿದಂತೆ ಇತರರಿದ್ದರು.