ಜಿಲ್ಲೆ

ಕುಸ್ತಿಯಲ್ಲಿ ವಿಕ್ರಂ ಘೋರ್ಪಡೆಗೆ ಜಯ

ಎಂ.ಎಸ್​.ಹಿರೇಮಠ ಬೆಳಗಾವಿ

ಬೈಹೊಂಗಲ: ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಬೆಳವಡಿ ಮಲ್ಲಮ್ಮ ಉತ್ಸವ&2025 ರ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಪುರುಷ ಹಾಗೂ ಮಹಿಳೆಯರ ಕುಸ್ತಿಗೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ ನೀಡಿದರು.

ಪುರುಷರ ವಿಭಾಗ: ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಮಹಾರಾಷ್ಟ್ರದ ವಿಕ್ರಂ ೂರ್ಪಡೆ ದೆಹಲಿಯ ಪ್ರವಿಣ ಜೋಗಿ ಅವರನ್ನು ಚಿತ್ತ ಮಾಡಿ ಜಯಗಳಿಸಿದರು. ಕರ್ನಾಟಕ ಕೇಸರಿ ರಾಣೆಬೆನ್ನೂರಿನ ಕಾರ್ತಿಕ ಕಾಟೆ ಹರಿಯಾಣದ ಹರೀಶ ಕುಮಾರನನ್ನು ಸೋಲಿಸಿದರು. ಧಾರವಾಡದ ನಾಗರಾಜ ಬಸಿಡೋಣಿ ಉತ್ತರ ಪ್ರದೇಶದ ಉದಯಕುಮಾರನನ್ನು ಸೋಲಿಸಿದರು.ಕಂಗ್ರಾಳಿಯ ಕಾಮೇಶ ಪಾಟೀಲ ದೇಹಲಿಯ ಜಗಜೀತಸಿಂಗ್​ಗೆ ಸೋಲಿಸಿದರು. ಕೋಲ್ಹಾಪುರ ಅತುಲ ತಾವರೆ ಧಾರವಾಡ ರುದ್ರಪ್ಪನನ್ನು ಸೋಲಿಸಿದರು. ಪರುಷರ ವಿಭಾಗದಲ್ಲಿ ಒಟ್ಟು 29 ಜೋಡಿ ಕುಸ್ತಿಗಳು ನಡೆದವು.

ಮಹಿಳಾ ವಿಭಾಗ: ಕುಸ್ತಿಯಲ್ಲಿ ಕೊಲ್ಹಾಪುರ ಅಂಕಿತಾ ಜಾಧವ ಬೆಳಗಾವಿಯ ರಾಧಿಕಾ ತೊಂಡಿಹಾಲ್​ ಸೋಲಿಸಿ ಜಯಗಳಿಸಿದರು. ಖಾನಾಪುರದ ರುತುಜಾ ಗುರವ ಬೆಳಗಾವಿಯ ಭಕ್ತಿ ಪಾಟೀಲಳನ್ನು ಸೋಲಿಸಿ ವಿಜಯಶಾಲಿಯಾದರು. ಮುಧೋಳದ ಪ್ರಭಾವತಿ ರುತುಜಾ ರಾವಳನ್ನು ಸೋಲಿಸಿದರು. ಮಹಿಳೆಯರ ಏಳು ಜೋಡಿ ಕುಸ್ತಿ ರಂಜಿಸಿದವು.