ಭಟ್ಕಳ: ತಾಲೂಕಿನ ತಲಗೋಡು ನಿವಾಸಿ ವಿಕಿತ್ ಕಿಶನ್ ನಾಯ್ಕ ಇವರು ಎನಿಮೇಶನ್ ಮತ್ತು ಮಲ್ಟಿಮೀಡಿಯ ಡಿಸೈನ್ ಪದವಿಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ತಲಗೋಡಿನ ಸೀತಾರಾಮನ ಮನೆಯ ಕಿಶನ್ ನಾಯ್ಕ ಹಾಗೂ ನಾಗವೇಣಿ ದಂಪತಿಯ ಪುತ್ರನಾಗಿದ್ದಾರೆ. ಬೆಂಗಳೂರಿನ ಅನಿಮೇಶನ್ ಕಾಲೇಜ್ನಲ್ಲಿ ಬಿವಿ.ಎ.( ಅನಿಮೇಶನ್ ಎಂಡ್ ಮಲ್ಟಿಮೀಡಿಯಾ ಡಿಸೈನ್) ಪದವಿ ಅಭ್ಯಸಿಸುತ್ತಿದ್ದು, ಇತ್ತೀಚೆಗೆ ನಡೆದ ಕೊನೆಯ ಪರೀಕ್ಷೆಯಲ್ಲಿ ಶೇ. 86.25 ಅಂಕ ಗಳಿಸಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದಾನೆ.