ದೇವಿತಂದ್ರೆ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಸಪ್ತ ಮಾತೃಕೆ ದೇವಿರಮ್ಮ ಸಿಡಿ ಉತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. 
ಜಿಲ್ಲೆ

ದೇವಿತಂದ್ರೆಯಲ್ಲಿ ವಿಜೃಂಭಣೆಯ ದೇವಿರಮ್ಮ ಸಿಡಿ ಉತ್ಸವ

ಅಭಿನಯ್ ಎಚ್.ಎಂ

ಸಾಲಿಗ್ರಾಮ: ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಸಪ್ತ ಮಾತೃಕೆ ದೇವಿರಮ್ಮ ಸಿಡಿ ಉತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಸಿಡಿಯನ್ನು ಹೂವು ಹಾಗೂ ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಅಪಾರ ಭಕ್ತ ಸಮೂಹದ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಅರ್ಚಕ ಮಹದೇವಪ್ಪ ನೇತೃತ್ವದ ತಂಡ ಪೂಜೆ ಸಲ್ಲ್ಲಿಸಿದ ಬಳಿಕ ದೇವೀರಮ್ಮ ತಾಯಿಯ ದೇವಸ್ಥಾನದ ಸುತ್ತ ಮೂರು ಸುತ್ತು ಸಿಡಿ ಉತ್ಸವವನ್ನು ಎಳೆಯಲಾಯಿತು. ಇಷ್ಟಾರ್ಥ ಸಿದ್ಧಿಗಾಗಿ ಸಿಡಿಗೆ ಹಣ್ಣು ದವನ ಎಸೆದು ಪ್ರಾರ್ಥಿಸಲಾಯಿತು.

ನ.6ರಂದು ಸಪ್ತಮಾತೃಕೆ ದೇವಿರಮ್ಮ ತಾಯಿಯ ರಥೋತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ ನಾಡಿನ ಹಲವು ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆೆಯಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿಕೊಂಡಿದೆ.