ವಿಜಯವಾಣಿ ಸುದ್ದಿಜಾಲ ವಿಜಯಪುರ
ದೇಹ, ಮನಸ್ಸುಗಳು ಸದಾ ಉಲ್ಲಾಸಭರಿತವಾಗಿರಲು ಕ್ರೀಡೆಗಳು ಸಹಕಾರಿ ಎಂದು ಪುರಸಭೆ ಅಧ್ಯಕ್ಷೆ ವಿಮಲಾ ಬಸವರಾಜು ಹೇಳಿದರು.
ಪಟ್ಟಣದ ಸರ್ಕಾರಿ ಕಿರಿಯ ಕಾಲೇಜು ಆಟದ ಮೈದಾನದಲ್ಲಿ ಬಲಿಜ ಸಂಘದಿಂಧ ಏರ್ಪಡಿಸಿದ್ದ ಬಲಿಜ ಪ್ರೀಮಿಯರ್ ಲೀಗ್ ಸೀಸನ್-3 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳು ಸಂಬಂಧಗಳನ್ನು ಗಟ್ಟಿಗೊಳಿಸುವುದಲ್ಲದೆ, ಮನಸ್ಸಿಗೂ ಮುದ ನೀಡುತ್ತವೆ. ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಎಲ್ಲದಕ್ಕಿಂತ ಮುಖ್ಯ ಎಂದರು.
ಟೌನ್ ಬಲಿಜ ಸಂಘದ ಅಧ್ಯಕ್ಷ ತರಕಾರಿ ಮುನಿರಾಜು, ಖಜಾಂಚಿ ಮುನಿರಾಜು, ಮಾಜಿ ಕಾರ್ಯದರ್ಶಿ ಆರ್.ಮುನಿರಾಜು, ಮಾಜಿ ಉಪಾಧ್ಯಕ್ಷ ಸಿ.ವೆಂಕಟೇಶಪ್ಪ, ಪುರಸಭೆ ಉಪಾಧ್ಯಕ್ಷ ಎಂ.ಕೇಶವಪ್ಪ, ಮಾಜಿ ಸದಸ್ಯರಾದ ಹರೀಶ್, ಸೊಸೈಟಿ ನಾಗಪ್ಪ ಇದ್ದರು.