ಮಂಗಳೂರು: ದಸರಾ ಹಾಗೂ ದೀಪಾವಳಿ ಹಬ್ಬಗಳ ಅಂಗವಾಗಿ ವಿಜಯವಾಣಿ ಆಯೋಜಿಸಿದ 12ನೇ ವರ್ಷದ ‘ವಿಜಯೋತ್ಸವ- 2024’ ಶಾಪಿಂಗ್ ಉತ್ಸವದ ಲಕ್ಕಿ ಡ್ರಾದಲ್ಲಿ ಅಗರಿ ಎಂಟರ್‌ಪ್ರೈಸಸ್‌ನ ಮೇರಿಹಿಲ್ ಶಾಖೆಯ ಗ್ರಾಹಕ ಬಂಪರ್ ಬಹುಮಾನ ವಿಜೇತರಾಗಿದ್ದು, ಅವರಿಗೆ ಶುಕ್ರವಾರ ಬೈಕ್ ಹಸ್ತಾಂತರಿಸಲಾಯಿತು.
ಗ್ರಾಹಕ ಶಿವರಾಜ್ ಕಾವೂರು ಅವರಿಗೆ ಅಗರಿ ಎಂಟರ್‌ಪ್ರೈಸಸ್ ಮಾಲೀಕ ಅಗರಿ ರಾಘವೇಂದ್ರ ರಾವ್ ಅವರು ಬೈಕ್ ಹಸ್ತಾಂತರಿಸಿದರು. ಕಳೆದ 15 ವರ್ಷಗಳಿಂದ ಅಗರಿ ಸಂಸ್ಥೆಯ ಗ್ರಾಹಕನಾಗಿದ್ದು, ದಸರಾ ಸಂದರ್ಭದಲ್ಲಿ ಟಿವಿ ಖರೀದಿಸಿದ್ದೆ. ಆ ಸಂದರ್ಭ ನೀಡಿದ್ದ ಕೂಪನ್‌ನಲ್ಲಿ ಬೈಕ್ ಸಿಕ್ಕಿರುವುದು ಖುಷಿ ತಂದಿದೆ. ವಿಜಯೋತ್ಸವ ಶಾಪಿಂಗ್ ಉತ್ಸವ ಆಯೋಜಿಸಿದ ವಿಜಯವಾಣಿಗೆ ಹಾಗೂ ಇದರಲ್ಲಿ ಭಾಗಿಯಾದ ಅಗರಿ ಎಂಟರ್‌ಪ್ರೈಸಸ್‌ಗೆ ಕೃತಜ್ಞತೆಗಳು ಎಂದು ಶಿವರಾಜ್ ಕಾವೂರು ಹೇಳಿದರು.
ಅಗರಿ ರಾಘವೇಂದ್ರ ರಾವ್ ಮಾತನಾಡಿ, ವಿಜಯವಾಣಿ ಜತೆ ಆರಂಭದಿಂದಲೂ ನಮ್ಮ ಸಂಸ್ಥೆ ಕೈ ಜೋಡಿಸುತ್ತಿದ್ದು, ಈ ಬಾರಿ ಬಂಪರ್ ಬಹುಮಾನ ನಮ್ಮ ಗ್ರಾಹಕರಿಗೆ ಲಭಿಸಿರುವುದು ನಮಗೆ ಸಿಕ್ಕಿದಷ್ಟೇ ಸಂತೋಷ. ವಿಜಯವಾಣಿ ಬಹಳ ಪಾರದರ್ಶಕವಾಗಿ ಶಾಪಿಂಗ್ ಉತ್ಸವ ಆಯೋಜಿಸುತ್ತಿದೆ. ನಮ್ಮಂತಹ ಮಧ್ಯಮ ಮಟ್ಟದ ಉದ್ಯಮಿಗಳಿಗೆ ವಿಜಯವಾಣಿಯ ವಿಜಯೋತ್ಸವ ಶಾಪಿಂಗ್ ಉತ್ಸವ ಬಹಳಷ್ಟು ಪ್ರಯೋಜನವಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಗ್ರಾಹಕರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ. ಮುಂದೆಯೂ ವಿಜಯವಾಣಿಗೆ ಪೂರ್ಣ ಸಹಕಾರ ನೀಡುತ್ತೇವೆ ಎಂದರು.
ಡಿಐಟಿ ಸೊಲ್ಯೂಷನ್ಸ್ ಪ್ರೈ.ಲಿ.ನ ಸಿಇಒ ಶ್ಯಾಂ ಶಾನುಭಾಗ್, ಅಗರಿ ಸಂಸ್ಥೆಯ ಮೇರಿಹಿಲ್ ಶಾಖೆಯ ಮ್ಯಾನೇಜರ್ ಸಂದೀಪ್, ಲಾಯಿಡ್ ಕಂಪೆನಿಯ ಬ್ರಿಜೇಶ್, ವಿಜಯವಾಣಿಯ ಮಾರುಕಟ್ಟೆ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಸಂತೋಷ್ ಬಂಗೇರ, ಸಿಬ್ಬಂದಿಗಳಾದ ಶರತ್, ಮಧುಕಿರಣ್, ಸಂಪ್ರೀತ್, ಶಶಿಕಲಾ, ಲತಾ, ವನಜಾಕ್ಷಿ, ಚಿತ್ರಕಲಾ, ಯೋಗರಾಜ್, ವಿಕಾಸ್ ಮೊದಲಾದವರಿದ್ದರು.