ಕಲಬುರಗಿ: ಉಸ್ತುವಾರಿ ಸಚಿವರನ್ನ ಎಸಿ ರೂಮ್ ನಿಂದ ಹೊರದಬ್ಬಿ ಎಲ್ಲಾ ತಾಲ್ಲೂಕಿಗೆ ಹೋಗಿ ವೀಕ್ಷಣೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಹೇಳಿದರು.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಚಿವರು ಮುಖ್ಯಮಂತ್ರಿ ಗೆ ಮನವಿ ಕೋಡುವದಕ್ಕಿಂತ ಮುಂಚೆ ಹೊಲಗಳಿಗೆ ಭೇಟಿ ನೀಡಲಿ ಎಂದು ಹೇಳಿದರು.
ರೈತರಿಗೆ ಪರಿಹಾರ ಕೊಡುವದು ಎಷ್ಟು ಮುಖ್ಯವೋ ರೈತರಿಗೆ ದೈರ್ಯ ಹೇಳುವ ಕೆಲಸ ಕೂಡ ಆಗಬೇಕಿದೆ. ನಿಮ್ಮ ಕೃಷಿ , ಕಂದಾಯ ಉಸ್ತುವಾರಿ ಸಚಿವರಿಗೆ ಒಂದು ತಿಂಗಳು ಬೆಂಗಳೂರಿಗೆ ಬರಬೇಡಿ ಅಂತಾ ಹೇಳಿ ಎಂದು ಸಲಹೆ ನೀಡಿದರು.
ಮಲ್ಲಿಕಾರ್ಜುನ್ ಖರ್ಗೆಯವರ ಬಳಿ ರೈತ ಅಳಲು ತೋಡಿಕೊಂಡಾಗ ನನ್ನದೆ 40 ಎಕರೆ ಹಾಳಾಗಿದೆ ಅಂತಾ ಹೇಳಿದ್ದಾರೆ. ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡ್ತೆನೆ. ಮೊದಲು ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಪರಿಹಾರ ಕೋಡಿ ಎಂದು ಆಗ್ರಹಿಸಿದರು.