ತ್ಯಾಮಗೊಂಡ್ಲು: ಪ್ರತಿದಿನ ಕಡ್ಡಾಯವಾಗಿ ದಿನಪತ್ರಿಕೆ ಓದುವ ಹವ್ಯಾಸ ಬೆಳಸಿಕೊಂಡರೆ ಸಾಮಾನ್ಯ ಜ್ಞಾನದ ಜತೆಗೆ ಪ್ರಚಲಿತ ವಿದ್ಯಮಾನಗಳ ಅರಿವು ಉಂಟಾಗುತ್ತದೆ. ಭಾಷೆಯ ಮೇಲಿನ ಹಿಡಿತ ಹೆಚ್ಚಾಗುತ್ತದೆ ಎಂದು ಕುಲವನಹಳ್ಳಿ ಗ್ರಾಪಂ ಪಿಡಿಒ ಡಿ.ಪದ್ಮನಾಭ್ ತಿಳಿಸಿದರು.
ಹೋಬಳಿಯ ಕುಲವನಹಳ್ಳಿ ಗ್ರಾಪಂನಿಂದ ಶುಕ್ರವಾರ ಬಿಲ್ಲನಕೋಟೆ ಗ್ರಾಮದ ಎಚ್.ಜೆ.ವಿದ್ಯಾ ಸೇವಾ ಸಂಸ್ಥೆಯ ಆರ್.ವಿ.ಕೆ.ಗ್ರಾಮಾಂತರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿ ಮಿತ್ರ ಸಂಚಿಕೆಯನ್ನು ಸಂಗ್ರಹಿಸಿ ಸೂಕ್ತ ಅಭ್ಯಾಸ ನಡೆಸಬೇಕು. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು. ಉಚಿತವಾಗಿ ಪತ್ರಿಕೆ ಸಿಗುತ್ತದೆ ಎಂದು ಅಸಡ್ಡೆ ಮಾಡದೆ ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಲಾಂತರ ಮೊತ್ತದ ಹಣ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ತರಬೇತಿ ನೀಡುವ ಸಂಸ್ಥೆಗಳು ನೀಡುವ ಪಠ್ಯ ವಿಷಯವನ್ನು ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಸಂಚಿಕೆ ಯಿಂದಲೇ ಪಡೆಯಬಹುದು. ಈಗಿನಿಂದಲೇ ಶಾಲೆಯಲ್ಲಿ ವಿದ್ಯಾಭ್ಯಾಸದ ಒಳ್ಳೆಯ ಬುನಾದಿ ಹಾಕಿಕೊಂಡರೆ ಮುಂಬರುವ ಕ್ಲಿಷ್ಟಕರ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಸುಗಮವಾಗಿ ಎದುರಿಸಬಹುದು ಎಂದು ಅಧ್ಯೆ ರತ್ನಮ್ಮ ಮಕ್ಕಳಿಗೆ ಹೇಳಿದರು.
ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲ ಸದಸ್ಯರ ಸಹಕಾರದಿಂದ ಪಂಚಾಯಿತಿ ವ್ಯಾಪ್ತಿಯ ಪ್ರೌಢಶಾಲೆಯ ಎಲ್ಲ ಮಕ್ಕಳಿಗೂ ಸಂಚಿಕೆ ನೀಡುತ್ತಿರುವುದು ಸಂತಸದ ವಿಚಾರ, ಎಲ್ಲ ವಿದ್ಯಾರ್ಥಿಗಳು ಅದರ ಉಪಯೋಗ ಪಡೆಯುಬೇಕು ಎಂದು ಗ್ರಾಪಂ ಕಾರ್ಯದರ್ಶಿ ಸಿಂಚನಾ ಹೇಳಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸಮನಾದ ಪೈಪೋಟಿ ನೀಡಲು ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ಸಹಕಾರಿ.
ನಮ್ಮ ಶಾಲೆಯಲ್ಲಿ ಉತ್ತಮ ಲಿತಾಂಶ ಪಡೆಯಲು ಪತ್ರಿಕೆಯ ಕೊಡುಗೆ ಅಪಾರ. ವಿದ್ಯಾರ್ಥಿ ಮಿತ್ರ ಪತ್ರಿಕೆ ಪ್ರಾಯೋಜಕತ್ವ ನೀಡುತ್ತಿರುವ ಗ್ರಾಪಂನ ಎಲ್ಲ ಚುನಾಯಿತ ಪ್ರತಿನಿಧಿಗಳ ಕಾರ್ಯ ಶ್ಲಾನೀಯ ಎಂದು ಮುಖ್ಯ ಶಿಕ್ಷಕ ಎಚ್.ಇ.ಹರೀಶ್ ತಿಳಿಸಿದರು.
ಮುಖಂಡರಾದ ಹನುಮಯ್ಯ, ಸುನಿಲ್, ರಮೇಶ್, ಶಿಕ್ಷಕರಾದ ಬಸವರಾಜು, ಜಗದಾಂಬಾ, ಕೆ.ಎಲ್.ರಾಜೇಶ್ವರಿ, ವಿ.ಸೋಮಶೇಖರ್, ಎಸ್.ಕೋಮಲಾ, ಬಿ.ಆರ್.ಮಂಜುನಾಥ್, ಸಿಬ್ಬಂದಿ ಬಿ.ಡಿ.ಚಿನ್ನಸ್ವಾಮಿ, ರಮಾ ಇತರರು ಇದ್ದರು.