ಜಿಲ್ಲೆ

ವಿಜಯವಾಣಿ, ದಿಗ್ವಿಜಯ ನ್ಯೂಸ್ ಬಿಗ್ ಇಂಪ್ಯಾಕ್ಟ್: ವಿವಾದಿತ ಚರ್ಚ್​ ಕಟ್ಟಡ ಕಾಮಗಾರಿಗೆ ಬಿತ್ತು ಬ್ರೇಕ್

ಬೆಳಗಾವಿ: ಸುದ್ದಿ ಮಾಡಿದ ಕೆಲವೇ ಗಂಟೆ-ಗಳಲ್ಲಿ ವಿವಾದಿತ ಚರ್ಚ್​  ಕಟ್ಟಡ ಕಾಮಗಾರಿಗೆ ಬ್ರೇಕ್​​ ಬಿದ್ದಿದೆ. ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ಚರ್ಚ್ ನಿರ್ಮಾಣ ಆಗುತ್ತಿರುವುದನ್ನು ನಿನ್ನೆಯಷ್ಟೇ ವಿಜಯವಾಣಿ, ದಿಗ್ವಿಜಯ ನ್ಯೂಸ್​ ವರದಿ ಮಾಡಿತ್ತು.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದ ಸರ್ವೆ ನಂಬರ್ ೫೭೬ ರಲ್ಲಿ ನಡೀತಿದ್ದ ಚರ್ಚ್ ಕಾಮಗಾರಿ ನಡೆಯುತ್ತಿತ್ತು. ಇದಕ್ಕೆ ಗ್ರಾಮಸ್ಥರು ಸೇರಿದಂತೆ ಹಿಂದುಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು.

ಈ ಕುರಿತು ಸೋಮವಾರ ಸುದ್ದಿ ಪ್ರಕಟವಾಗಿತ್ತು. ಈ ಬೆನ್ನಲ್ಲೇ ಇಂದು ಬೆಳಗ್ಗೆ ಸೋಮಾವ ಸಂಜೆ ಗ್ರಾಮಕ್ಕೆ ಕಂದಾಯ, ಮುಜರಾಯಿ, ತಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ‌ ನೀಡಿ ಗ್ರಾಮದ ಎರಡೂ ಗುಂಪಿನವರಿಗೂ ಸಂಧಾನ ಸಭೆ ನಡೆಸಿದ್ದಾರೆ. ಈ ಬಳಿಕ ಅನಧಿಕೃತ ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಸೂಚಿಸಿದ್ದಾರೆ.

ಕಟ್ಟಡ ಜಾಗವನ್ನು ಅಧಿಕೃತಗೊಳಿಸಿದ ನಂತರ ಕಟ್ಟಡ ನಿರ್ಮಾಣ ಮಾಡಿ ಅಲ್ಲಿವರೆಗೂ ಕಟ್ಟಡ ಕಟ್ಟಲು ಕೈ ಹಾಕಬಾರದು ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)